ಅನುದಿನ ಕವನ-೧೨೪೮, ಹಿರಿಯ ಕವಿ: ಅರುಣಕುಮಾರ್ ಹಬ್ಬು, ಹುಬ್ಬಳ್ಳಿ

ಕಣ್ಣಿದ್ದೂ ಕಾಣದವರಿಗೆ
ಕಾಣುವ ಕಣ್ಣ ಕೊಡಿ

ಸುಖವಿದ್ದೂ ದುಃಖಿಸುವವರಿಗೆ
ನಿಜ ಸುಖದ ಅರಿವು ನೀಡಿ

ಹೃದಯವಿದ್ದೂ ಪ್ರೀತಿಸದವರಿಗೆ
ಮಮತೆಯ ಖುಷಿಯ ಅನುಭವ ನೀಡಿ

ಎಲ್ಲರಲಿ ದೋಷ ಕಾಣುವವರಿಗೆ
ಸರಿ ತಪ್ಪಿನ ಭೇಧದರಿವು ಕಾಣಿಸಿ

ಕೋಪವೇ ಜೀವವೆನುವವಗೆ
ಪ್ರೀತಿಯ ಕಂಪು ಪಸರಿಸುವ ಹೂವಾಗಿ

ಆಂತರ್ಯದ ಕಿಚ್ಚು ತಣಿಸಲು
ಮೃದುತ್ವದ ವೈಶಾಲ್ಯದ ನೀರೆರಚಿ

ಮನುಕುಲದ ಒಳಿತಿಗೆ
ಮಾನವತೆಯ ಜ್ಯೋತಿ ಬೆಳಗಿ

ಸೃಷ್ಟಿಕರ್ತ ದೇವನೇ ಮನುಷ್ಯನ
ಸೃಷ್ಟಿಸಿದ ನೀನು ಒಳಿತಿನ ಜೊತೆಗೆ
ಕೆಡುಕಿನ ಅಂಶವನ್ನೂ ಏಕಿಟ್ಟೆ ನಮ್ಮಲಿ?

-ಅರುಣಕುಮಾರ್ ಹಬ್ಬು, ಹುಬ್ಬಳ್ಳಿ

—–