ಶಿಸ್ತು, ಪರಿಣಾಮಕಾರಿ ಪಾಠದಿಂದ  ಶಿಷ್ಯರ ಮನಸ್ಸನ್ನು ಗೆದ್ದವರು ಪ್ರೊ.‌ಅಮರೇಗೌಡರು – ಡಾ.‌ ಹೊನ್ನೂರಾಲಿ  ಪ್ರಶಂಸೆ

ಬಳ್ಳಾರಿ, ಜೂ.2: ವಿದ್ಯಾರ್ಥಿಗಳಲ್ಲಿ ಶಿಸ್ತನ್ನು ಮೂಡಿಸುತ್ತ, ಪರಿಣಾಮಕಾರಿಯಾಗಿ ಪಾಠ ಮಾಡುತ್ತಲೇ ಶಿಷ್ಯರ ಮನಸ್ಸನ್ನು ಗೆದ್ದವರರೆಂದರೆ ಪ್ರೊ. ಅಮರೇಗೌಡರು ಎಂದು ರಾಜ್ಯಶಾಸ್ತ್ರ ವಿಭಾಗದ ಮುಖ್ಯಸ್ಥ ಡಾ.ಹೊನ್ನೂರಾಲಿ  ಅವರು ಹೇಳಿದರು.                                          ನಗರದ ಶ್ರೀಮತಿ ಸರಳಾದೇವಿ ಸತೀಶ್ಚಂದ್ರ ಅಗರವಾಲ್ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ಆಯೋಜಿಸಿದ್ದ ಅರ್ಥಶಾಸ್ತ್ರ ವಿಭಾಗದ ಮುಖ್ಯಸ್ಥ ಪ್ರೊ.ಅಮರೇಗೌಡ ಅವರ  ವಯೋ ನಿವೃತ್ತಿ ಬೀಳ್ಕೊಡುಗೆ ಸಮಾರಂಭದಲ್ಲಿ ಅವರು ಮಾತನಾಡಿದರು.

ಸರಳ ಸಜ್ಜನಿಕೆಯ ಪ್ರೊ. ಅಮರೇಗೌಡರು ತಮ್ಮ ವೃತ್ತಿ ಜೀವನದಲ್ಲಿ ನಿಷ್ಠೆ ಮತ್ತು ಪ್ರೀತಿಯಿಂದ ನಿಸ್ವಾರ್ಥ ಸೇವೆಯನ್ನು ನೀಡಿದ್ದಾರೆ. ಅವರ ಮುಂದಿನ ಜೀವನ ನೆಮ್ಮದಿ , ಆಯುರಾರೋಗ್ಯದಿಂದ ಕೂಡಿರಲಿ ಎಂದು ಆಶಿಸಿದರು.
ಸನ್ಮಾನ ಸ್ವೀಕರಿಸಿ ಮಾತನಾಡಿದ ಅಮರೇಗೌಡ ಅವರು  ಮೊದಲಿನಿಂದಲೂ ನಾನು ಕೆಲಸದಲ್ಲಿ ಕ್ರೀಯಾಶೀಲತೆ , ಶ್ರದ್ಧೆ ಜತೆ ಸಮಯ ಪ್ರಜ್ಞೆಗೆ ಆದ್ಯತೆಯನ್ನು ನೀಡಿರುವೆ ಎಂದರು.
ಬಡ ವಿದ್ಯಾರ್ಥಿಗಳೇ ಹೆಚ್ಚಿನ‌ ಸಂಖ್ಯೆಯಲ್ಲಿ ಕಾಲೇಜಿನಲ್ಲಿ ಕಲಿಯುತ್ತಿದ್ದು, ಅಧ್ಯಾಪಕ ವರ್ಗ ಶಿಸ್ತು, ಕಾರ್ಯಕ್ಷಮತೆ ಸಮಯಪ್ರಜ್ಞೆಯಿಂದ ಕಾರ್ಯನಿರ್ವಹಿಸುವ ಮೂಲಕ ಧನ್ಯತೆ ಪಡೆಯ ಬಹುದು ಎಂದು ತಿಳಿಸಿದರು.
ವೃತ್ತಿ ಜೀವನವಲ್ಲಿ ನಾನು  ವಿದ್ಯಾರ್ಥಿ ಮುಖಿಯಾಗಿ ಕರ್ತವ್ಯ ನಿರ್ವಹಿಸಿ ತೃಪ್ತಿ ,ಧನ್ಯತೆಯ ಭಾವವನ್ನು ಕಂಡುಕೊಂಡಿರುವ ಎಂದು ಹೇಳಿದರು.
ವಾಣಿಜ್ಯ, ರಾಜ್ಯಶಾಸ್ತ್ರ ವಿಭಾಗ ಮುಖ್ಯಸ್ಥರು ಉತ್ತಮವಾಗಿ ತಮ್ಮ ವಿಭಾಗಗಳನ್ನು ಮಾರ್ಪಡಿಸಿದ್ದಾರೆ  ಎಂದು ಅಮರೇಗೌಡರು ಮೆಚ್ಚುಗೆ ವ್ಯಕ್ಯಪಡಿಸಿದರು.
ಕುಟುಂಬ ಸದಸ್ಯರ ಸಹಕಾರ, ಬೆಂಬಲವಿದ್ದರಿಂದ ತಾವು ಉತ್ತಮವಾಗಿ ಸೇವೆ ಸಲ್ಲಿಸಲು ಸಾಧ್ಯವಾಯಿತು ಎಂದರು.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದ ಪ್ರಾಂಶುಪಾಲ ಡಾ. ಎಚ್. ಕೆ ಮಂಜುನಾಥ್ ರೆಡ್ಡಿ ಅವರು ಅಮರೇಗೌಡರು ಬೋಧನಾ ಕೌಶಲ್ಯದಿಂದ ಶಿಕ್ಷಣ ರಂಗದಲ್ಲಿ ಸುಧೀರ್ಘವಾದ ಸೇವಿಸಲ್ಲಿಸಿ, ಎಲ್ಲರೊಂದಿಗೆ ಉತ್ತಮವಾದ ಬಾಂಧವ್ಯವನ್ನು ಹೊಂದಿ ಸಾರ್ಥಕ ಸೇವೆಯನ್ನು ಸಲ್ಲಿಸಿದ್ದಾರೆ ಎಂದು ಬಣ್ಣಿಸಿದರು.
ಪ್ರಾಚಾರ್ಯರಾಗಿ ಆತ್ಮವಿಶ್ವಾಸದಿಂದ ಕಾರ್ಯನಿರ್ವಹಿಸಲು ಇವರ ಸಹಕಾರ, ಬೆಂಬಲವೂ ಕಾರಣ ಎಂದು ಹೇಳುತ್ತಿದ್ದಾಗ ಡಾ. ರೆಡ್ಡಿ ಅವರು ಗದ್ಗಿತರಾದರು.
ಈ ಸಂದರ್ಭದಲ್ಲಿ ಪ್ರಾದ್ಯಾಪಕರಾದ
ಡಾ.ಪ್ರಹ್ಲಾದ ಚೌದ್ರಿ, ಡಾ.ಸಿ.ಎಚ್. ಸೋಮನಾಥ್ , ಪ್ರೊ. ರಾಮಾಂಜನೇಯ, ಡಾ. ದಸ್ತಗೀರಸಾಬ್ ದಿನ್ನಿ , ಮೋನಿಕಾ ರಂಜನ್, ಡಾ. ಆರ್ ಎಂ .ಶ್ರೀದೇವಿ.  ಡಾ.ಹುಚ್ಚುಸಾಬ್ , ಪಂಪನಗೌಡ, ಸಾವಿತ್ರಿ ಮತ್ತಿತರರು ಮಾತನಾಡಿದರು.
ವೇದಿಕೆಯಲ್ಲಿ ಡಾ.ಮಂಜುನಾಥ ಎಸ್, ಅಮರೇಗೌಡರ ಧರ್ಮಪತ್ನಿ ಭಾಗೀರಥಿ ಅಮರೇಗೌಡ ಇದ್ದರು.
ಕಾರ್ಯಕ್ರಮದಲ್ಲಿ ವಿವಿಧ ವಿಭಾಗಗಳ ಸಹಾಯಕ ಪ್ರಾಧ್ಯಾಪಕರು, ಉಪನ್ಯಾಸಕರು, ಅಮರೇಗೌಡರ ಮಕ್ಕಳಾದ ದರ್ಶನ, ಮಮತಾ ಮತ್ತಿತರರು ಉಪಸ್ಥಿತರಿದ್ದರು.
ಅಧ್ಯಾಪಕರ ಸಂಘದ ಕಾರ್ಯದರ್ಶಿ ಡಾ.‌ಮಂಜುನಾಥ್ ಎಸ್ ಸ್ವಾಗತಿಸಿ, ನಿರೂಪಿಸಿದರು.
ಇತಿಹಾಸ ವಿಭಾಗದ ಸಹ ಪ್ರಾಧ್ಯಾಪಕ ಪ್ರೊ. ಶಶಿಕಾಂತ ವಂದಿಸಿದರು.
—–