ಎನಿತು ಸುಂದರ,
ಎನಿತು ಮನೋಹರ,
ಎನ್ನ ಊರು ಮಧುಗಿರಿ !
ಏನ ವರ್ಣಿಸಲಿ,
ಏನ ಬಣ್ಣಿಸಲಿ,
ಎತ್ತ ನೋಡೆ ,
ಗಿರಿಯ ಸಿರಿ !
ಇರುವುದಿಲ್ಲಿ ,
ವಿಶ್ವವಿಖ್ಯಾತ,
ಏಕಶಿಲಾ ಗಿರಿ..!
ಉದಯ ಮೂಡೆ ,
ಗಿರಿಯ ನಡುವೆ,
ನಗುತ ನೇಸರ ಕಂಗೊಳಿಸುವ !
ಸಂಜೆ ಆದೊಡೆ
ಭಾಸ್ಕರ ,
ಗಿರಿಯ ಹಣೆಯ ಸಿಂಗರಿಸುವ !
ಮಳೆಯು ಸುರಿದೊಡೆ
ವರುಣ ದೇವ
ಗಿರಿಯನ್ನೆಲ್ಲ ಅಭಿಷೇಕಗೈವ
ಬರಿಯ ಮಳೆ ಇದಲ್ಲ ಕೇಳು…
ಮಧುವಿನ ಮಳೆಯ ಸುರಿಸಿ, ಸುರಿಸಿ..
ಮಧುಗಿರಿ ಎಂಬ ಹೆಸರನು ,
ತಾ ಕೊಟ್ಟಿರುವ ಮಾಧವ !!
-ವೀಣಾ ಶ್ರೀನಿವಾಸ್, ಮಧುಗಿರಿ
—–