ಬಳ್ಳಾರಿ: ಸರಳಾದೇವಿ ಸರಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ಅರ್ಥಪೂರ್ಣ ವಿಶ್ವ ಪರಿಸರ ದಿನಾಚರಣೆ

ಬಳ್ಳಾರಿ, ಜೂ.20: ನಗರದ ಎಸ್.ಎಸ್.ಎ (ಸರಳಾದೇವಿ) ಸರಕಾರಿ ಪ್ರಥಮ ದರ್ಜೆ ಕಾಲೇಜಿನ ರಾಷ್ಟ್ರೀಯ ಸೇವಾ ಯೋಜನಾ ಘಟಕಗಳು ಮತ್ತು ಇಕೋ ಕ್ಲಬ್‌ ಸಹಯೋಗದಲ್ಲಿ ವಿಶ್ವ ಪರಿಸರ ದಿನವನ್ನು ಅರ್ಥಪೂರ್ಣವಾಗಿ ಆಚರಿಸಲಾಯಿತು.
ಬಳ್ಳಾರಿ ಜಿಲ್ಲಾ ಉಪ ಅರಣ್ಯ ಸಂರಕ್ಷಣಾಧಿಕಾರಿ ಸಂದೀಪ್‌ ಹೆಚ್ ಸೂರ್ಯವಂಶಿ‌ ಅವರು ಕಾಲೇಜು ಆವರಣದಲ್ಲಿ ಸಸಿಗಳನ್ನು ನೆಡುವವ ಮೂಲಕ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು.
ಬಳಿಕ‌ನಡೆದ ವೇದಿಕೆ ಕಾರ್ಯಕ್ರಮದಲ್ಲಿ ವಾಣಿಜ್ಯಶಾಸ್ತ್ರ ವಿಭಾಗದ ಮುಖ್ಯಸ್ಥರು ಮತ್ತು ಇಕೋ ಕ್ಲಬ್‌ ಸಂಚಾಲಕ ಡಾ.ಜಿ.ಪ್ರಹ್ಲಾದ್‌ ಚೌದ್ರಿ ಅವರು ವಿ‍ಶ್ವ ಪರಿಸರ ದಿನಾಚರಣೆಯ ಮಹತ್ವದ ಕುರಿತು ವಿವರಿಸುತ್ತಾ,
ಕೇರಳದ ಕಾಸರಗೋಡಿನ ಸುತ್ತಮುತ್ತ ಗೋಡಂಬಿ ತೋಟಗಳಲ್ಲಿ ಸಿಂಪಡಿಸಿದ ಎಂಡೋಸಲ್ಫಾನ್‌ ದುಷ್ಪರಿಣಾಮವನ್ನು ಪ್ರಸ್ತುತ ದಿನಗಳಲ್ಲೂ ಅಲ್ಲಿನ ಜನತೆ ಅನುಭವಿಸುತ್ತಿದ್ದಾರೆ ಎಂದು ತಿಳಿಸಿದರು.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಕಾಲೇಜಿನ ಪ್ರಾಂಶುಪಾಲ ಡಾ.ಮಂಜುನಾಥರೆಡ್ಡಿ ಅವರು ಮಾತನಾಡಿ, ಪರಿಸರ ಸಂರಕ್ಷಣೆಯ ಹೊಣೆ ವಿದ್ಯಾರ್ಥಿ, ಯುವ ಜನರ ಮೇಲಿದೆ ಎಂದು ಹೇಳಿದರು.
ತಮ್ಮ ವಿದ್ಯಾರ್ಥಿ ಜೀವನದಲ್ಲಿ ಎನ್.‌ಎಸ್.‌ಎಸ್.‌ ಕಾರ್ಯಕರ್ತನಾಗಿದ್ದ ನೆನಪುಗಳನ್ನು ಮೆಲುಕು ಹಾಕಿದರು. ಎನ್.‌ಎಸ್.‌ಎಸ್.‌ಗೀತೆಯನ್ನು ಹಾಡುವ ಮೂಲಕ‌ ಗಮನ ಸೆಳೆದರು.
ಎನ್.‌ಎಸ್.‌ಎಸ್. ಕಾರ್ಯಕ್ರಮಾಧಿಕಾರಿ ಶ್ರೀಮತಿ ರಮಾದೇವಿ ಅವರು ನಾವು ಏಕೆ ಪರಿಸರದ ಬಗ್ಗೆ ಹೆಚ್ಚು ಕಾಳಜಿ ವಹಿಸಬೇಕೆಂದು ವಿದ್ಯಾರ್ಥಿಗಳಿಗೆ ಮನವರಿಕೆ ಮಾಡಿದರು.
ಎನ್.ಎಸ್.ಎಸ್.‌ ವಿದ್ಯಾರ್ಥಿನಿಯಾದ ಕುಮಾರಿ ಹೇಮಾ ಮತ್ತು ಕುಮಾರಿ ರೋಹಿಣಿ ಅವರು ಪ್ರಾರ್ಥಿಸಿದರು. ನಂತರ ಎನ್.‌ಎಸ್.‌ಎಸ್.‌, ಗೀತೆಯನ್ನು ಕುಮಾರಿ ರಾಜೇಶ್ವರಿ ಮತ್ತು ತಂಡ ಹಾಡಿದರು. .
ಕಾರ್ಯಕ್ರಮದಲ್ಲಿ ರಾಜ್ಯಶಾಸ್ತ್ರ ವಿಭಾಗದ ಮುಖ್ಯಸ್ಥ ಡಾ.ಹೊನ್ನೂರಾಲಿ ಮತ್ತು ಬಿ ಘಟಕದ ಕಾರ್ಯಕ್ರಮಾಧಿಕಾರಿ ಬಿ.ರಾಮಸ್ವಾಮಿ ಮತ್ತಿತರರು ಉಪಸ್ಥಿತರಿದ್ದರು.
ಎನ್.‌ಎಸ್.‌ಎಸ್. ಮತ್ತೋರ್ವ‌ ಕಾರ್ಯಕ್ರಮ ಅಧಿಕಾರಿ ಡಾ.ಚನ್ನಬಸವಯ್ಯ ಅವರು ಸ್ವಾಗತಿಸಿದರು. ಎನ್.‌ಎಸ್.‌ಎಸ್.‌, ಕಾರ್ಯಕ್ರಮಾಧಿಕಾರಿ ಎನ್.ಗಂಟೆಪ್ಪ ಶೆಟ್ಟಿ ಪ್ರಾಸ್ತಾವಿಕವಾಗಿ ಮಾತನಾಡಿದರು. ಬಿ.ಎಸ್.ಸಿ. ಅಂತಿಮ ವರ್ಷದ ವಿದ್ಯಾರ್ಥಿನಿ ರಾಜೇಶ್ವರಿ ವಂದಿಸಿದರು.
———