ಹಾಯ್ಕುಗಳು
೧ ಆಕಾಶಕ್ಕಿಟ್ಟ ರಂಗೋಲಿ; ಹೊಳೆಯುವ ನಕ್ಷತ್ರಪುಂಜ
೨
ನೆಲದಾಳಕೆ
ಬೇರು; ಮುಗಿಲೆಡೆಗೆ
ಬೆಳೆವ ಮರ
೩
ಮರೆತು ಹೋದ
ಮಾತಿಗೆ; ನೆನಪೋಲೆ
ಮುತ್ತಿನುಂಗುರ
೪
ಮದವೇರಿದ
ಕುದುರೆ; ಮನಸಾರೆ
ಕುಣಿದು ಸುಸ್ತು
೫
ದಯಾಮರಣ
ಕೇಳಿದೆ; ಬದುಕಿಕೋ
ಎಂದು ನಕ್ಕಳು
೬
ಉರಿಯುತ್ತಿದ್ದ
ವಿರಹ; ಅಪ್ಪುಗೆಗೆ
ಆರಿ ಹೋಯಿತು
೭
ಆಸೆಕಂಗಳ
ನಗುವಲಿ; ಅಸಂಖ್ಯ
ಸವಿಗನಸು
೮
ಕಪ್ಪು ಬಳಿದ
ಕೂದಲಲೂ; ಮುಪ್ಪಿನ
ಬಣ್ಣ ಬಯಲು
– ಸಿದ್ದಲಿಂಗಪ್ಪ ಬೀಳಗಿ.ಹುನಗುಂದ
——