ಒತ್ತಡದ ಜೀವನದಿಂದ ಪಾರಾಗಲು ಯೋಗ ಸಹಕಾರಿ -ಯೋಗ ಶಿಕ್ಷಕ ಎಚ್.ರುದ್ರಪ್ಪ

ಬಳ್ಳಾರಿ.ಜೂ 21: ಆಧುನಿಕ ಕಾಲದಲ್ಲಿ ಒತ್ತಡದ ಜೀವನದಿಂದ ಬಿಡುಗಡೆಯಾಗಲು ದೈಹಿಕ ಮತ್ತು ಮಾನಸಿಕ ಆರೋಗ್ಯವನ್ನು ಕಾಪಾಡಿಕೊಂಡು ಸಧೃಡರಾಗಿ ಬೆಳೆಯಲು ಯೋಗ ಸಹಕಾರಿಯಾಗುತ್ತದೆ ಎಂದು ಯೋಗ ಶಿಕ್ಷಕ ಎಚ್.ರುದ್ರಪ್ಪ ಹೇಳಿದರು
ನಗರದ ಶ್ರೀಮತಿ ಸರಳಾದೇವಿ ಸತೀಶ್ಚಂದ್ರ ಅಗರವಾಲ್ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ಶುಕ್ರವಾರ   ದೈಹಿಕ ಶಿಕ್ಷಣ ವಿಭಾಗ,ಎನ್.ಎಸ್.ಎಸ್. ರೇಂಜರ್ ಎನ್.ಸಿ.ಸಿ.,ರೆಡ್ ಕ್ರಾಸ್ , ಸಾಂಸ್ಕೃತಿಕ ಘಟಕ ಇವುಗಳ ಸಂಯುಕ್ತಾಶ್ರಯದಲ್ಲಿ ಆಯೋಜಿಸಿದ್ದ’ ಅಂತಾರಾಷ್ಟ್ರೀಯ ಯೋಗ ದಿನಾಚರಣೆ ‘ ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡಿದರು.
ಪ್ರತಿದಿನ ಯೋಗ ಮತ್ತು ಪ್ರಾಣಾಯಾಮ ಮಾಡುವುದರಿಂದ ಸರ್ವರೋಗಗಳನ್ನು ನಿಯಂತ್ರಿಸಿ ಕೊಳ್ಳಬಹುದು ಎಂದು ತಿಳಿಸಿದರು.
ಪತಂಜಲಿ ಯೋಗ ಶಿಕ್ಷಕ ಶಂಕರ್ ಯೋಗವು ಪ್ರಾಚೀನ ಪರಂಪರೆ ಮತ್ತು ಜಾಗತಿಕ ಆರೋಗ್ಯ ಹಾಗೂ ಶಾಂತಿಯನ್ನು ಉತ್ತೇಜಿಸುವ ಸಾಮರ್ಥ್ಯ ಹೊಂದಿದೆ ಎಂದರು.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದ ಪ್ರಾಂಶುಪಾಲ ಡಾ.ಎಚ್.ಕೆ. ಮಂಜುನಾಥ ರೆಡ್ಡಿ ಅವರು,  ವಿದ್ಯಾರ್ಥಿಗಳು ಯೋಗವನ್ನು ನಿತ್ಯ ಬದುಕಿನ ಭಾಗವಾಗಿಸಿಕೊಂಡು ಸಾಗಬೇಕು ಎಂದು ಹೇಳಿದರು.

ವೇದಿಕೆಯಲ್ಲಿ ದೈಹಿಕ ಶಿಕ್ಷಣ ನಿರ್ದೇಶಕ ಪಂಪನಗೌಡ, ಎನ್.ಎಸ್.ಘಟಕದ ಅಧಿಕಾರಿಗಳಾದ ರಮಾಬಾಯಿ, ಬಿ.ರಾಮಸ್ವಾಮಿ ಇದ್ದರು.
ಕಾರ್ಯಕ್ರಮದಲ್ಲಿ ಪ್ರಾಧ್ಯಾಪಕರಾದ ಡಾ.ಹೊನ್ನೂರಾಲಿ ,ಕೆ.ಎನ್.ರಾಮಾಂಜನೇಯ, ಡಾ.ದಸ್ತಗೀರಸಾಬ್ ದಿನ್ನಿ, ಡಾ.ಮಂಜುನಾಥ, ಡಾ.ಎಚ್.ಎಂ.ಚನ್ನಬಸವಯ್ಯ, ಡಾ.ಶಶಿಕಾಂತ ಬಿಲ್ಲವ ,ಡಾ.ಪಂಚಾಕ್ಷರಿ , ಕಲ್ಯಾಣ ಬಸವ, ಪಲ್ಲವಿ, ಸಲೀಯಾ, ದೊಡ್ಡ ಬಸಪ್ಪ, ಗಂಟೆಪ್ಪ ಶೆಟ್ಟಿ, ಪ್ರವೀಣ್ ಕುಮಾರ್, ಲಿಂಗಪ್ಪ, ಬಸಪ್ಪ ಉಪಸ್ಥಿತರಿದ್ದರು.