ಮಾನವತೆಯ ತೇರು…
ನೀನು ಮಳೆಯಂತೆ ತಂಪು ತಂಗಾಳಿ ಭುವಿಗೆ
ಮನಕೆ ಜನಕೆ ನೊಂದವಗೆ
ನೀನು ಹೂವಂತೆ ಸೊಗಸು ಘಮ ಧರೆಗೆ
ಪ್ರೀತಿ ನಿನ್ದೆ ನಮ್ಮೆದೆಗೆ
ನೀನೆ ಸಮತೆ
ಹಚ್ಚಿ ಹಣತೆ
ನಿಂತ ನಿನಗೆಈ ನೆಲ ಶರಣಾಗತ ನಿನಗೆ
ನಿನಗೆ ಶರಣಾಗತ ಈ ನೆಲ…
ಮಾನವರೆಲ್ಲ ಒಂದೆಂದ
ಮಾನವೀಯ ಮೌಲ್ಯ ಮಹಾಬಿಕ್ಕು
ಜಾತಿಭೀತಿ ಕಿತ್ತೆಸೆದ
ಮಾನವತೆಯ ತೇರು ನಮ್ಮಬಿಕ್ಕು
ಶತಶತಮಾನ ಅಮರ ನಿನ್ನೆಸರೆಂದು
ಸರಿಸಮನ್ಯಾರು ಇಲ್ಲಿ ನಿನಗೆಂದೆಂದು
ನೀನೆ ಗತಿ ನಮಗೆ
ನೀನೆ ಮತಿ ನಮಗೆ…
ಕ್ಷೇಮ ನಿನ್ನ ಮಡಿಲು
ಭೀಮ ತೋರಿದ ಮಹಾಗಡಲು
ಕಳೆದೆ ಎಲ್ಲ ಕತ್ತಲು
ಜನಮಾನಕೆ ನೀನೆ ಮಹಾಕಂದೀಲು
ಶತಶತಮಾನ ಅಮರ ನಿನ್ನೆಸರೆಂದು
ಸರಿಸಮನ್ಯಾರು ಇಲ್ಲಿ ನಿನಗೆಂದೆಂದು
ನೀನೆ ಗತಿ ನಮಗೆ
ನೀನೆ ಮತಿ ನಮಗೆ…
-ಸಿದ್ದುಜನ್ನೂರ್, ಚಾಮರಾಜ ನಗರ
—–