ಅನುದಿನ‌ ಕವನ-೧೨೭೭, ಕವಿ: ಯಲ್ಲಪ್ಪ ಹಂದ್ರಾಳ, ದೇವದುರ್ಗ, ಕವನದ ಶೀರ್ಷಿಕೆ:ಪುಟ್ಟಿಯೊಳಗೆ ಸಿಕ್ಕಿಹಾಕಿಕೊಂಡ ಹಣ್ಣಿನ ಉವಾಚ

ಪುಟ್ಟಿಯೊಳಗೆ ಸಿಕ್ಕಿಹಾಕಿಕೊಂಡ ಹಣ್ಣಿನ ಉವಾಚ

ಒತ್ತೊತ್ತಾಗಿ ಕುಳಿತು
ಎಂತೆಂಥವನ್ನೋ ಹೊತ್ತು
ಮೆತ್ತಗಾಗುವ ಮುನ್ನ
ಕೊಟ್ಟು ಬಿಡು ನೀ ನಮ್ಮ
ನೀ ಕೊಟ್ಟು ಬಿಡು ನಮ್ಮ.   ||ಒತ್ತೊತ್ತಾಗಿ||

ಇತ್ತಿತ್ತಲಾಗಿ ನೀನು
ಉತ್ತಮವಾದದ್ದನ್ನಾಯ್ದು
ಸುತ್ತ ಮೈಯನು ಕೊಯ್ದು
ಉತ್ತಮವಿವೆಲ್ಲವೆಂದು
ಮೆತ್ತಗ ಕರೆಯುವೆ ಗಿರಾಕಿನ ||  2. ||

ಅಂತು ಬರುವವನೊಬ್ಬ
ಎಂತು ಬೆಲೆಯೆ¤ದು ಕೇಳಿ
ಇಂತಿಂಥವು ಇರಲಿ ಎ¤ದು
ನಿಂತು ಒಯ್ಯುವ ನಮ್ಮ
ಕೊಯ್ದು ಬಯ್ಯುವ ನಿಮ್ಮ.  ||  3. ||

ಇಂತಿ ವಿನಂತಿ ಇದೆ ನಮ್ಮದು
ಎಂತು ಗಳಿಸುವೆ ನೀನು
ಒಂದಕ್ಕೆ ತಂದು ಮೂರು ಹೇಳಿ
ಎರಡಕ್ಕೆ ಮಾರುವೆ ಜಾಣ
ನರಕದಲ್ಲಿದೆ ನಿನಗೆ ತಾಣ. ||    4.  ||

-ಯಲ್ಲಪ್ಪ ಹಂದ್ರಾಳ, ದೇವದುರ್ಗ

(ಧಾರವಾಡದಿ¤ದ ಬರುವಾಗ ದಾರಿಯಲ್ಲಿ ಹಣ್ಣು ಮಾರುವವರು ಬುಟ್ಟಿಯಲ್ಲಿ ಒ¤ದರಮೇಲೊ¤ದರಂತೆ (ಪಿರಮಿಡ್ ತರಹ)ಜೋಡಿಸಿದ್ದು ಕಂಡಾಗ.. .ಕೆಳಗಡೆ ಸಿಕ್ಕು ಮೆತ್ತಗಾದ ಹಣ್ಣು ಮಾರುವವನಿಗೆ ಕೋರಿಕೆ ಇಡುತ್ತಿದೆ ಎ¤ದು ಭಾವಿಸಿ ಬರೆದಿದ್ದು.)
—–