ಹೊಸ ಆರ್ಥಿಕ ನೀತಿಗಳು ದೇಶದ ರೈತಾಪಿ ವರ್ಗಕ್ಕೆ ಮಾರಕ -ಜೆ ಎಂ ವೀರಸಂಗಯ್ಯ

ಬಳ್ಳಾರಿ, ಜು.4: ಹೊಸ ಆರ್ಥಿಕ ನೀತಿಗಳು ದೇಶದ ರೈತಾಪಿ ವರ್ಗಕ್ಕೆ ಮಾರಕವಾಗಿ ಎಂದು ಕರ್ನಾಟಕ ರಾಜ್ಯ ರೈತ ಸಂಘದ ಉಪಾಧ್ಯಕ್ಷ ಜೆ ಎಂ ವೀರಸಂಗಯ್ಯ ಅವರು ಹೇಳಿದರು.
ನಗರದ ಎಸ್.ಎಸ್.ಎ (ಶ್ರೀಮತಿ ಸರಳಾದೇವಿ ಸತೀಶ್ಚಂದ್ರ ಅಗರ್ವಾಲ್‌) ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ಅರ್ಥಶಾಸ್ತ್ರ ಮತ್ತು ರಾಜ್ಯಶಾಸ್ತ್ರ ವಿಭಾಗಗಳ ಸಹಯೋಗದಲ್ಲಿ ಆಯೋಜಿಸಿದ್ದ
“ಕೃಷಿ ಉತ್ಪನ್ನಗಳ ಬೆಂಬಲ ಬೆಲೆ ಮತ್ತು ರಾಜಕೀಯ ಅರ್ಥಶಾಸ್ತ್ರದ ಪ್ರಶ್ನೆ” ವಿಶೇಷ ಉಪನ್ಯಾಸ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಅವರು ಮಾತನಾಡಿದರು.
ಎರಡು ವರ್ಷಗಳ ಹಿಂದೆ ಕೃಷಿ ಉತ್ಪನ್ನಗಳಿಗೆ ಬೆಂಬಲ ಬೆಲೆ ಸೇರಿದಂತೆ ನ್ಯಾಯಯುತ ಬೇಡಿಕೆಗಳಿಗೆ ಹೋರಾಟ ನಡೆಸಿದ ರೈತರ ಚಳುವಳಿಯನ್ನು ಕೇಂದ್ರ ಸರಕಾರ ಹತ್ತಿಕ್ಕಿತು ಎಂದು ಟೀಕಿಸಿದರು.
ದೇಶದ ಅತಿ ದೊಡ್ಡ ಮಾರ್ಕೆಟ್ ಕೃಷಿ ವಲಯವಾಗಿದ್ದು ರೈತರ ಭೂಮಿಯನ್ನು ಲಪಾಟಿಯಿಸಲು ಕಾರ್ಪೋರೆಟ್ ಕಂಪನಿಗಳು ಹೊಂಚು ಹಾಕಿವೆ ಎಂದು ಆರೋಪಿಸಿದರು.
ಈ ಹಿನ್ನಲೆಯಲ್ಲಿ ರಾಜಧಾನಿ ಬೆಂಗಳೂರಿನಲ್ಲಿ 5800ಮಾಲ್ ಗಳನ್ನು ಆರಂಭಿಸಲಾಗಿದೆ ಎಂದರು.
ಬೆಳೆ ನಷ್ಟ, ಸಾಲದ ಹೊರೆ ಮತ್ತಿತರ ಕಾರಣಗಳಿಂದಾಗಿ
ಹಾಲು ಕುಡಿಸುವ ರೈತರ ಕೈಗಳಿಗೆ ವಿಷ ಕುಡಿಯುವ ಪರಿಸ್ಥಿತಿ ಬಂದಿದೆ ಎಂದು ವಿಷಾಧಿಸಿದರು.
ಸಮಾರಂಭ ಉದ್ಘಾಟಿಸಿದ ಪ್ರಾಂಶುಪಾಲ ಡಾ. ಹೆಚ್.ಕೆ.ಮಂಜುನಾಥ ರೆಡ್ಡಿ ಅವರು ಮಾತನಾಡಿ, ಜೆ.ಎಂ.ವೀರಸಂಗಯ್ಯ ಅವರ ಹೋರಾಟಗಳನ್ನು ಕೇವಲ ಟಿವಿಗಳಲ್ಲಿ ಮತ್ತು ದಿನಪತ್ರಿಕೆಗಳಲ್ಲಿ ಮಾತ್ರ ನೋಡುತ್ತಿದ್ದು ಇಂದು ಇವರೊಂದಿಗೆ ವೇದಿಕೆ ಹಂಚಿಕೊಂಡು ನೇರ ನಿಷ್ಟುರ ಮಾತುಗಳನ್ನು ಕೇಳುವ ಅವಕಾಶ ಕಲ್ಪಿಸಿದ ಅರ್ಥಶಾಸ್ತ್ರ ಮತ್ತು ರಾಜ್ಯಶಾಸ್ತ್ರ ವಿಭಾಗಗಳಿಗೆ ಧನ್ಯವಾದಗಳನ್ನು ತಿಳಿಸಿದರು. ವೀರಸಂಗಯ್ಯ ಅವರು ಪದವಿ ಪೂರೈಸದಿದ್ದರೂ ಸಾವಿರಾರು ರೈತ ಕುಟುಂಬಗಳಿಗೆ ದಾರಿದೀಪವಾಗಿದ್ದಾರೆ. ಇಂದಿನ ಮಾತುಗಳನ್ನು ಕೇಳಿದ ಪ್ರತಿಯೊಬ್ಬರೂ ವೀರಸಂಗಯ್ಯ ಅವರುಗಳಂತಾದರೆ, ಇಡೀ ಸಮಾಜ ಸಾಕಷ್ಟು ಸುಧಾರಣೆಯಾಗುತ್ತದೆ ಎಂದರು.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ರಾಜ್ಯಶಾಸ್ತ್ರ ವಿಭಾಗದ ಮುಖ್ಯಸ್ಥ ಡಾ. ಹೊನ್ನೂರಲಿ,
ಪ್ರಸ್ತುತ ರೈತರ ಸಮಸ್ಯೆಗಳಿಗೆ ಕೇವಲ ರೈತಾಪಿ ವರ್ಗ ಕಾರಣರಲ್ಲ, ಇದರ ಹಿಂದೆ ಸಾಕಷ್ಟು ನೈಸರ್ಗಿಕ, ರಾಜಕೀಯ ಮತ್ತು ಆರ್ಥಿಕ ಕಾರಣಗಳಿವೆ ಎಂದು ತಿಳಿಸಿದರು.


ಚಳುವಳಿ ರೂಪಿಸುವ, ಹೋರಾಟ ಮಾಡುವವರು
ರೈತರ ಪರವಾಗಿ ಮಾತನಾಡುವ ಪ್ರತಿನಿಧಿಗಳು ಸಂಸತ್ ಹಾಗೂ ರಾಜ್ಯದ ಶಾಸನಸಭೆಗಳಲ್ಲೂ ಇಲ್ಲವಾಗಿದ್ದಾರೆ, ಆದ್ದರಿಂದಲೇ ರೈತರ ಸಮಸ್ಯೆಗಳು ಉಲ್ಭಣಗೊಂಡಿವೆ ಜತೆಗೆ ಹಾಗೆಯೇ ಉಳಿದಿವೆ ಎಂದು ಅಭಿಪ್ರಾಯಪಟ್ಟರು.
ರೈತರ ಸಮಸ್ಯೆಗಳನ್ನು ಸಮರ್ಪಕವಾಗಿ ಬಿಂಬಿಸಿ ಪರಿಹಾರ ಕಂಡುಕೊಳ್ಳುವ ಪ್ರತಿನಿಧಿಗಳ ಸಂಖ್ಯೆ ಇಲ್ಲವೆಂದು ವಿಷಾಧಿಸಿದರು.
ಅರ್ಥಶಾಸ್ತ್ರ ಮತ್ತು ರಾಜ್ಯಶಾಸ್ತ್ರ ಈ ಎರಡು ವಿಭಾಗಗಳು ಅಂತರ್ಗತ ಸಂಬಂಧ ಹೊಂದಿರುವದರಿಂದ ಇಂತಹ ವಿಶೇಷ ಉಪನ್ಯಾಸ ಹಮ್ಮಿಕೊಳ್ಳಲು ಸಾಧ್ಯವಾಗಿದೆ ಎಂದರು.
ಇತಿಹಾಸ ವಿಭಾಗದ ಮುಖ್ಯಸ್ಥ ಕೆ.ಎನ್.ರಾಮಾಂಜನೇಯಾವರು ಮಾತನಾಡಿ, ತಾವು ಬಾಲ್ಯದಲ್ಲಿ ಮ ಅನುಭವಿಸಿದ ನೋವು ಮತ್ತು ಹೋರಾಟಗಳನ್ನು ನೆನಪಿಸಿಕೊಂಡರು.
ಕಾರ್ಯಕ್ರಮದಲ್ಲಿ ಪರಿಕ್ಷಾ ನಿಯಂತ್ರಕರಾದ ಶೋಭ, ಸಹ ಪ್ರಾದ್ಯಾಪಕ ಪ್ರೊ.‌ರಾಮಾಂಜನೇಯ, ಪ್ರೊ.ಎನ್. ಗಂಟೆಪ್ಪ ಶೆಟ್ಟಿ ಉಪಸ್ಥಿತರಿದ್ದರು.
ಅರ್ಥಶಾಸ್ತ್ರ ವಿಭಾಗದ ಮುಖ್ಯಸ್ಥ ಡಾ. ಹುಚ್ಚೂಸಾಬ್ ಪಿ ಅವರು ಪ್ರಾಸ್ತಾವಿಕವಾಗಿ ಮಾತನಾಡಿದರು. ಸಹ ಪ್ರಾಧ್ಯಾಪಕ ಡಾ. ಚನ್ನಬಸವಯ್ಯ ಹೆಚ್ ಎಂ ಸ್ವಾಗತಿಸಿದರು. ಸಹಾಯಕ‌ ಪ್ರಾದ್ಯಾಪಕ ಡಾ.ಶ್ರೀನಿವಾಸ ರೆಡ್ಡಿ ನಿರೂಪಿಸಿದರು. ರಾಜ್ಯಶಾಸ್ತ್ರ ವಿಭಾಗದ ಹಿರಿಯ ಉಪನ್ಯಾಸಕ ಡಾ. ಟಿ. ದುರುಗಪ್ಪ ಅತಿಥಿಗಳನ್ನು ಪರಿಚಯಿಸಿದರು.
ಅರ್ಥಶಾಸ್ತ್ರ ವಿಭಾಗದ ದ್ವಿತೀಯ ಎಂ.ಎಂ ವಿದ್ಯಾರ್ಥಿನಿ ಕುಮಾರಿ ಪಲ್ಲವಿ ಮತ್ತು ಸಂಗಡಿಗರು ಪ್ರಾರ್ಥಿಸಿದರು.
—–