ಅನುದಿನ ಕವನ-೧೩೦೧, ಕವಿ: ಲೋಕೇಶ್ ಮನ್ವಿತಾ, ಬೆಂಗಳೂರು

ನೀನಿರುವಷ್ಟು
ಹೊತ್ತು ನಾ ಖುಷಿಯಲ್ಲೇ ಇದ್ದೆ.
ಈ ಭೇಟಿಯಲ್ಲಿಯೋ
ರಹಸ್ಯವೇನೂ
ಅಡಗಿರಲಿಲ್ಲ

ನಿನ್ನೊಂದಿಗಿನ ಹಲವು
ನೆನಪುಗಳಿಗೆ ನಾನಿಂದು ಸಾಕ್ಷಿ
ರೋಸಿ ಹೋಗಿದ್ದ
ಭಾವಗಳಿಂದು
ಭಾರ ಇಳಿಸಿಕೊಳ್ಳಲು
ಒಂದಿಷ್ಟಾದರೂ ಹೆಗಲಾಗಿ
ಸಿಕ್ಕ ಘಳಿಗೆಗೆ ಧನ್ಯವಾದಗಳು

ಎಲ್ಲಾ ಕಟ್ಟಳೆಗಳನ್ನು
ಮೀರಿ ನಡೆದುಬಿಟ್ಟರೂ
ಪರಿದಿಯೊಳನಿಂದ
ಈಚೆ ಇಳುಕಲಿಲ್ಲ ಇಬ್ಬರೂ
ಎದೆಗೆ ಸಮಾಧಾನವಿಯ್ಯುವ
ಕೈಗಳಲ್ಲಿ ನನ್ನೊವೊಂದಿಷ್ಟು
ನೋವುಗಳ ಮೆತ್ತಿ ಬಂದಿರುವೆ

ತೊಳೆದುಕೊಳ್ಳುವ
ಇರಾದೆಯಾಗುವಷ್ಟು
ಹೊತ್ತು ಉಳಿಸಿಕೋ
ಕಡೆ ಪಕ್ಷ
ನಿನ್ನಲ್ಲಿ ಒಂದಿಷ್ಟು ಉಳಿದರೆ
ನಾನೆಷ್ಟೋ ಧನ್ಯ
ಮತ್ತೆ ಮತ್ತೆ ನೆನೆದ ತಕ್ಷಣ
ನಿನ್ನ ಹೃದಯ ತಲುಪುತ್ತದೆ
ಈ ತಂತುವಿನ ಅಳಲು

-ಲೋಕೇಶ್ ಮನ್ವಿತಾ, ಬೆಂಗಳೂರು
—–