ಅನುದಿನ ಕವನ-೧೩೦೩, ಕವಿ: ಸಿದ್ದು ಜನ್ನೂರು, ಚಾಮರಾಜನಗರ, ಕವನದ ಶೀರ್ಷಿಕೆ:ಅವಳೋ ಮರೆವಿಲ್ಲದ ನೆನಪು….

ಅವಳೋ ಮರೆವಿಲ್ಲದ ನೆನಪು….

ಅವಳೋ
ನನ್ನೆದೆಗೆ ಆತುಕೊಂಡ ಹೊಂಬೆಳಕು
ಅವಳೆನ್ನ ಸವಿ
ಸಿಹಿ ಕನಸುಗಳ ಕಣ್ಣ ಬೊಗಸೆಯಲ್ಲಿ ತುಂಬಿ
ಮಹೋನ್ನತವಾಗಿ ಬಾಳಿಗೆ ಬಂಗಾರವಾದ ಜೀವನ್ಮುಖಿ…

ಅವಳ ನಗುವದು ಸುಕೋಮಲ ಸಂಜೆಗೆ
ತಂಪು ಮಳೆಯಂತೆ
ತಂಗಾಳಿ ಸ್ವಾದ
ಅವಳ ಪಾದ ಮುತ್ತಿದ ಕಡಲೋ ಈಗಾ ಧನೊಸ್ಮಿ…

ಹೂ ಅಂದ ನಾಚುವ
ಮೊಗ ಚೆಲಿವಿಗೆ
ನದಿಝರಿ ಝಳು ನೀನಾದ ಮಾತು
ಸಂಗೀತ ಲಾಲಿತ್ಯ ಸುನಾದ ಗೀತ…

ಅವಳೆಂದು ನನಗೆ
ಮರೆವಿಲ್ಲದ ನೆನಪು
ಸೊಗಸ ಸುಗಂಧ
ಒಲವನಿತ್ತ ನನ್ನ ಸುಧೀರ್ಘ ಗೆಲುವು
ಅವಳು ನಾಚುವ
ನಾನು ಗೀಚುವ
ಪದ್ಯದಷ್ಟೆ ಸುವಿಸ್ತಾರ ಮುನ್ನುಡಿ…

-ಸಿದ್ದು ಜನ್ನೂರ್, ಚಾಮರಾಜನಗರ
—–