ಬಳ್ಳಾರಿ, ಆ. 1: ನಗರದ ಎಸ್ ಎಸ್ ಎ ಸರಕಾರಿ ಪ್ರಥಮದರ್ಜೆ ಕಾಲೇಜಿನ ಇತಿಹಾಸ ವಿಭಾಗದ ಮುಖ್ಯಸ್ಥ ಪ್ರೊ. ಕೆ ಎನ್ ರಾಮಾಂಜನೇಯ ಅವರು ಬುಧವಾರ
ವಯೋನಿವೃತ್ತಿ ಹೊಂದಿದ ಹಿನ್ನಲೆಯಲ್ಲಿ ಪ್ರಾಚಾರ್ಯರು, ಅಧ್ಯಾಪಕರು, ವಿದ್ಯಾರ್ಥಿಗಳು ಹೃದಯ ಸ್ಪರ್ಶಿಯಾಗಿ ಬೀಳ್ಕೊಟ್ಟರು.
ಕಾಲೇಜಿನ ಸಭಾಂಗಣ ಹಾಗೂ ಸ್ಕೌಟ್ಸ್ ಮತ್ತು ಗೈಡ್ ಕೊಠಡಿಯಲ್ಲಿ ಪ್ರತ್ಯೇಕವಾಗಿ ನಡೆದ ಕಾರ್ಯಕ್ರಮಗಳಲ್ಲಿ ಭಾಗವಹಿಸಿದ್ದ ಗಣ್ಯರು, ಸಹೋದ್ಯೋಗಿಗಳು ನಿವೃತ್ತಿ ಜೀವನ ಸುಖಕರವಾಗಿರಲಿ ಎಂದು ಶುಭ ಹಾರೈಸಿದರು. ಕಾಲೇಜು ಸಭಾಂಗಣದಲ್ಲಿ ಜರುಗಿದ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಪ್ರಾಚಾರ್ಯ ಡಾ. ಹೆಚ್ ಕೆ ಮಂಜುನಾಥ ರೆಡ್ಡಿ ಅವರು ಮಾತನಾಡಿ, ಪ್ರೊ. ಕೆ ಎನ್ ರಾಮಾಂಜನೇಯ ಅವರು ಕಾಲೇಜಿನ ಶೈಕ್ಷಣಿಕ ಅಭಿವೃದ್ದಿಗೆ ವಿಶೇಷವಾಗಿ ಸ್ಕೌಟ್ಸ್ ಮತ್ತು ಗೈಡ್ ಮುಖ್ಯಸ್ಥರಾಗಿ ರಾಜ್ಯಮಟ್ಟದಲ್ಲಿ ಕಾಲೇಜಿನ ಕೀರ್ತಿಪಾತಕೆ ಹಾರಿಸಿದ್ದನ್ನು ನೆನಪಿಸಿದರು. ಇತಿಹಾಸ ವಿಭಾಗದ ಸಹ ಪ್ರಾಧ್ಯಾಪಕ ಡಾ.ಸಿ. ಎಚ್ ಸೋಮನಾಥ ಅವರು ಗುಲ್ಬರ್ಗಾ ವಿವಿಯಲ್ಲಿ ಎಂ.ಎ ಓದುತ್ತಿದ್ದ ನೆನಪುಗಳನ್ನು ಸ್ಮರಿಸಿದ್ದಲ್ಲದೇ ಅತಿಥಿ ಉಪನ್ಯಾಸಕರಾಗಿದ್ದಾಗ ಪ್ರೊ.ರಾಮಾಂಜನೇಯ ಅವರ ಜತೆ ಸತತ ಹೋರಾಟದಿಂದ ಖಾಯಂ ಆದದ್ದನ್ನು ನೆನಪಿಸಿ ಭಾವುಕರಾದರು.
ಅರ್ಥಶಾಸ್ತ್ರ ವಿಭಾಗದ ನಿವೃತ್ತ ಮುಖ್ಯಸ್ಥ ಪ್ರೊ. ಅಮರೇಗೌಡ ಮಾತನಾಡಿ, ಪ್ರೊ. ರಾಮಾಂಜನೇಯ ಅವರಲ್ಲಿ ಹಾಸ್ಯ ಪ್ರಜ್ಞೆ ಇರುವುದು ವಿಶೇಷ ಗುಣ. ಶ್ರೀಮತಿ ರಾಮಾಂಜನೇಯ ಅವರು ಕೂಡಾ ಇಂದು ಅಧ್ಯಾಪಕ ನಿವೃತ್ತಿ ಯಾಗುತ್ತಿದ್ದಾರೆ. ದಂಪತಿ
ಆದಾಯ ವೆಚ್ಚ ಹೊಂದಾಣಿಕೆ ಮಾಡಿಕೊಳ್ಳಬೇಕು ಎಂದು ಸಲಹೆ ನೀಡಿದರು.
ಆಂಗ್ಲ ವಿಭಾಗದ ಮುಖ್ಯಸ್ಥರಾದ ಪ್ರೊ. ಮೋನಿಕಾ ರಂಜನ್, ಮೈಸೂರು ಸರಕಾರಿ ಪ್ರಥಮ ದರ್ಜೆ ಮಹಿಳಾ ಕಾಲೇಜಿನ ಪ್ರಾಚಾರ್ಯ ಪ್ರೊ. ಆರ್ ಮನೋಹರ, ಬಳ್ಳಾರಿ ಮಹಿಳಾ ಕಾಲೇಜಿನ ಡಾ.ರಾಘುವುಲು, ನಿವೃತ್ತ ಅಧ್ಯಾಪಕಿ ಶ್ರೀದೇವಿ, ಡಾ.ಟಿ. ದುರುಗಪ್ಪ, ಪ್ರೊ. ಗುರುಬಸಪ್ಪ, ದೈಹಿಕ ನಿರ್ದೇಶಕ ಪಂಪನಗೌಡ, ಡಾ.ತಿಪ್ಪೇರುದ್ರಪ್ಪ, ಡಾ.ಕೆ. ಬಸಪ್ಪ, ಪ್ರೊ. ರಾಮಾಂಜನೇಯ ಮತ್ತಿತರರು ಮಾತನಾಡಿದರು.
ಕಾಲೇಜಿನ ವಿವಿಧ ವಿಭಾಗಗಳ ಮುಖ್ಯಸ್ಥರು, ಸಹ, ಸಹಾಯಕ ಪ್ರಾಧ್ಯಾಪಕರು, ಉಪನ್ಯಾಸಕರು, ವಿವಿಧ ಕಾಲೇಜುಗಳಲ್ಲಿ ಸಹೋದ್ಯೋಗಿಗಳಾಗಿದ್ದ ಅಧ್ಯಾಪಕರು ಕಾರ್ಯಕ್ರಮದಲ್ಲಿ ಭಾಗವಹಿಸಿ ಗೌರವಿಸಿದರು.
ಸಹ ಪ್ರಾಧ್ಯಾಪಕ ಪ್ರೊ. ಶಶಿಕಾಂತ ಬಿಲ್ಲವ ಪರಿಚಯಿಸಿದರು.
ಕಾಲೇಜಿನ ಅಧ್ಯಾಪಕದ ಸಂಘದ ಕಾರ್ಯದರ್ಶಿ ಪ್ರೊ. ಮಂಜುನಾಥ್ ಸ್ವಾಗತಿಸಿ ನಿರೂಪಿಸಿದರು.