ಅನುದಿನ ಕವನ-೧೩೧೫, ಕವಿ: ಟಿ.ಪಿ.‌ಉಮೇಶ್, ಹೊಳಲ್ಕೆರೆ, ಕವನದ ಶೀರ್ಷಿಕೆ: ಏಕಾಂತವೆಂದರೆ

ಏಕಾಂತವೆಂದರೆ

ಪ್ರಿಯ ಒಲವೆ
ಏಕಾಂತವೆಂದರೆ
ಒಬ್ಬನೇ ಇರುವುದಲ್ಲ;
ಸದಾ ನಿನ್ನ ಜೊತೆಯಾಗಿರುವುದು!

ಸವಿ ಒಲವೆ
ಏಕಾಂತವೆಂದರೆ
ಮಾತಾಡದೇ ನಿಲ್ಲುವುದಲ್ಲ;
ಸದಾ ನಿನ್ನೊಡನೆ ಸಂಭಾಷಿಸುತ್ತಿರುವುದು!

ಸಿಹಿ ಒಲವೆ
ಏಕಾಂತವೆಂದರೆ
ನಿನ್ನ ನೋಡುತ್ತಾ ಕೂರುವುದಲ್ಲ;
ಸದಾ ನಿನ್ನೊಳಿದ್ದುಬಿಡುವುದು!

ನನ್ನೊಲವೆ
ಏಕಾಂತವೆಂದರೆ
ನಿನ್ನ ನೆನೆಯುತ್ತಿರುವುದಲ್ಲ;
ಸದಾ ನನ್ನನ್ನೇ ಮರೆತಿರುವುದು!

ಆತ್ಮದೊಲವೆ
ಏಕಾಂತವೆಂದರೆ
ನಿನ್ನ ಧ್ಯಾನಿಸುತ್ತಿರುವುದಲ್ಲ;
ಸದಾ ನಾ ನೀನಾಗಿಬಿಡುವುದು!

-ಟಿ.ಪಿ ಉಮೇಶ್, ಹೊಳಲ್ಕೆರೆ
—–