ಅನುದಿನ ಕವನ-೧೩೨೧, ಹಿರಿಯ ಕವಿ: ಎಸ್ ಎಸ್ ಹೊಡಮನಿ, ಹಳ್ಳಿಖೇಡ.ಬಿ. ಬೀದರ

ನಾನೇನೋ ಸುಮ್ಮನಿದ್ದೆ
ನನಗೆ ಗೊತ್ತೆ ಇರಲಿಲ್ಲ ಪ್ರೀತಿ
ನಿನ್ನ ಮುಗ್ಳನಗೆ ಕಿಡಿಗೆ
ಮೈ, ಮನ ಆಯಿತು ಬೆಚ್ಚಗೆ

ಯಾಕೆ ಹಾಗೆ ತಿಳಿಯಲೇ ಇಲ್ಲ
ಮದುವೆ ಆದೆ
ಮೂರು ಮಕ್ಕಳು, ಆರು ಮೊಮ್ಮಕ್ಕಳು ಆದವು
ಇನ್ನು ಆ ಪ್ರೀತಿಯ ಲೆಕ್ಕದಲ್ಲೆ ಇರುವೆ

ಈಗ ಲೆಕ್ಕ ಬಿಟ್ಟಿರುವೆ
ಪ್ರೀತಿಯೊಂದೇ ಜಪಿಸುತ್ತಿರುವೆ
ಅದಕ್ಕೆ ಅನ್ನುತ್ತಾರೆನೋ
ಪ್ರೀತಿಯೇ ದೇವರು

ಜನ ನೋಡಿ ನಗುತ್ತಾ ಇದ್ದಾರೆ ನನ್ನ
ಇವನೆಂತಹವನು
ಅದೇ ಬರೆಯುತ್ತಾನೆ
ಯಾವಾಗಲೂ ಪ್ರೀತಿನೇ ಅಂತಾನೆ

-ಎಸ್ ಎಸ್ ಹೊಡಮನಿ ಹಳ್ಳಿಖೇಡ.ಬಿ. ಬೀದರ
—–