ಅನುದಿನ‌ ಕವನ-೧೩೨೬, ಕವಿ: ಮನಂ, ಬೆಂಗಳೂರು, ಕವನದ ಶೀರ್ಷಿಕೆ: ನಾಲ್ಕು ಕಾಸು ಗಳಿಸಲು

ನಾಲ್ಕು ಕಾಸು ಗಳಿಸಲು

ನಾಲ್ಕು ಕಾಸು ಗಳಿಸಲು
ಕಳೆದುಕೊಂಡ ಮಾಳದಮಾದಪ್ಪದತ್ತ
ಕೊಡುಗೆಗಳ ಎಣಿಕೆಯೆಲ್ಲಿ?
ಊರ ಬಿಟ್ಟು ಊರವರ ಬಿಟ್ಟು
ಬಂಧು-ಬಳಗವ ತೊರೆದು
ಕಾಣದ ಊರಿಗೆ ಕಂಡವರ ಬಳಿ
ಊಳಿಗಕ್ಕೆ ಸೇರಿ ಗಳಿಕೆಗಿಳಿದು
ಕಳೆದು ಕೊಂಡದ್ದೆ ಹೆಚ್ಚು
ಗಳಿಸಿದ್ದೆಲ್ಲಿ ಯಾರಿಗೆ ಅಚ್ಚುಮೆಚ್ಚು?
ಆಯಸ್ಸು ಉಮ್ಮಸ್ಸು ಕಳಕೊಂಡು
ಬಯಸಿ ಬಯಸಿ ದಮ್ಮು ಕೆಮ್ಮು
ಕಮ್ಮಿ ದಮ್ಮಡಿ ಗಳಿಸಾಯಿತಲ್ಲ !
ತಮ್ಮದೆ ನೆಮ್ಮದಿ ಬೀಳಿಸಿಕೊಂಡು
ಯಾವ ಸುಖಕ್ಕೆ ಯಾವ ಹೆಚ್ಚಿಗೆಗೆ
ನಾಲ್ಕು ಕಾಸು ಗಳಿಸಿದೆವೆಯೊ!
ಗಳಿಸಿದ್ದಲ್ಲಿ ಉಳಿಸಿದ್ದೇನನ್ನ
ಬಳಸಿದ್ದೆನನ್ನ ನೀವಾಳಿಸಿ
ಮೂರಾದಿ ಮಣ್ಣಲ್ಲಿ ಬಣ್ಣಕಟ್ಟಿ
ಬಾಳ ಬರಡಾಗಿಸಿ ಗೇಯ್ಮೆಯವ
ಅನ್ನಿಸಿಕೊಂಡು ಸಾದಿಸಿದ್ದೇನನ್ನ!
ಊರಮಾಳದಿಂ ಮೇಗಳಮಾಳಕ್ಕೆ
ಹೋಗಲು ಕಟ್ಟಿಕೊಂಡದ್ದೇನನ್ನ
ಮಾಳವಾನಂದನಿಜಲಿಂಗಾಧಿಪತಿ!

-ಮನಂ(ಮಳವಳ್ಳಿ ನಂಜುಂಡಸ್ವಾಮಿ)ಐಪಿಎಸ್, ಬೆಂಗಳೂರು