ಜಿ. ಚೆಂಗಾರೆಡ್ಡಿ ಸ್ಮಾರಕ ಮಾನಸಿಕ ವಿಶೇಷ ಚೇತನರ ಶಾಲೆಯಲ್ಲಿ ಶಿಕ್ಷಕರ ದಿನಾಚರಣೆ


ಬಳ್ಳಾರಿ, ಸೆ.6:  ನಗರದ ಬೆಳಗಲ್ ರಸ್ತೆಯಲ್ಲಿರುವ ಜಿ. ಚೆಂಗಾರೆಡ್ಡಿ ಸ್ಮಾರಕ ಮಾನಸಿಕ ವಿಶೇಷ ಚೇತನರ ವಸತಿಯುತ ವಿಶೇಷ ಶಾಲೆಯಲ್ಲಿ ಗುರುವಾರ ಶಿಕ್ಷಕರ ದಿನವನ್ನು ಅರ್ಥಪೂರ್ಣವಾಗಿ  ಆಚರಿಸಲಾಯಿತು.        ಈ ಕಾರ್ಯಕ್ರಮದಲ್ಲಿ ಶ್ರೀ ಮಹಾದೇವ ತಾತ ಕಲಾ ಸಂಘದ ಸಂಸ್ಥಾಪಕ ಅಧ್ಯಕ್ಷರು, ಪತ್ರಿಕಾ ಛಾಯಾಗ್ರಾಹಕರು,ರಂಗಕಲಾವಿದರಾದ, ಪುರುಷೋತ್ತಮ ಅಂದ್ಯಾಳರವರು, ಇಂಡಿಯನ್ ಆಯಿಲ್ ಕಾರ್ಪೊರೇಷನ್ ನ ಸೀನಿಯರ್ ಸೇಲ್ಸ್ ಮ್ಯಾನೇಜರಾದ ಶ್ರೀಯುತ ರಾಜಶೇಖರ್ರವರು, ಹನುಮಾನ್ ಪೆಟ್ರೋಲ್ ಬಂಕಿನ ಮಾಲೀಕರಾದ ಶ್ರೀಯುತ ಸರೋಜ್ ಕುಮಾರ್ ರವರು, ಭಾಗವಹಿಸಿದ್ದರು.                                          ಪ್ರಾಸ್ತಾವಿಕವಾಗಿ ಮಾತನಾಡಿದ ಸಂಸ್ಥೆಯ ಗೌರವ ಸಲಹೆಗಾರರಾದ  ವಿ. ಸುಬ್ಬಾರೆಡ್ಡಿ ಅವರು,  ದೀಪ ತಾನು ಉರಿದು ಜಗತ್ತಿಗೆ ಬೆಳಕು ನೀಡುವ ಹಾಗೆ ಗುರು ಎಂದರು.  ಪುರುಷೋತ್ತಮ ಹಂದ್ಯಾಳ್ ಮಾತನಾಡಿ ವಿಶೇಷ ಶಿಕ್ಷಕರ ಸೇವೆಯನ್ನ ಕೊಂಡಾಡಿದರು. ಈ ಸಂದರ್ಭದಲ್ಲಿ ಹಿರಿಯ ವಿಶೇಷ ಶಿಕ್ಷಕ ಉಮಾಪತಿ ಅವರನ್ನು ಸನ್ಮಾನಿಸಲಾಯಿತು. ವಿಶೇಷ ಶಿಕ್ಷಕರಿಗಾಗಿ ಆಯೋಜಿಸಿದ ಕ್ರೀಡೆಗಳಲ್ಲಿ ಗೆದ್ದವರಿಗೆ ಮುಖ್ಯ ಅತಿಥಿಗಳಿಂದ ಬಹುಮಾನ ವಿತರಿಸಲಾಯಿತು. ನಂತರ ಸಂಸ್ಥೆಯ ವತಿಯಿಂದ ಕಾರ್ಯಕ್ರಮದಲ್ಲಿ ಭಾಗವಹಿಸಿದ ಮುಖ್ಯ ಅತಿಥಿಗಳನ್ನು ಸನ್ಮಾನಿಸಿ ಗೌರವಿಸಲಾಯಿತು.                                         ಶಾಲೆಯ ಮುಖ್ಯೋಪಾಧ್ಯಾಯರಾದ ಚಂದ್ರಶೇಖರ್  ವಂದಿ ಸಿದರು. ವಿಶೇಷ ಶಿಕ್ಷಕರಾದ  ಸೋಮನಾಥ್  ಕಾರ್ಯಕ್ರಮವನ್ನು ಸಂಯೋಜಿಸಿ,ನಿರೂಪಿಸಿದರು.         ಕಾರ್ಯಕ್ರಮದಲ್ಲಿ, ಶಾಲೆಯ ಸಮಸ್ತ ಸಿಬ್ಬಂದಿಗಳು ಭಾಗವಹಿಸಿ, ಹರ್ಷ ವ್ಯಕ್ತಪಡಿಸಿದರು. ವಿಶೇಷ ಶಿಕ್ಷಕರಿಂದ ಸಾಂಸ್ಕೃತಿಕ ಕಾರ್ಯಕ್ರಮಗಳು ಜರುಗಿದವು.