ಕೆಪಿಸಿಸಿ ಶಿಕ್ಷಕರ‌ ಘಟಕದಿಂದ ಬಳ್ಳಾರಿ‌ ನಿವೃತ್ತ ಶಿಕ್ಷಕಿ ಮೇರಿ ಸೆಲೀನಾ‌ ಅವರಿಗೆ ರಾಜೀವ್ ಗಾಂಧಿ ಉತ್ತಮ‌ ಶಿಕ್ಷಕ‌ ಪ್ರಶಸ್ತಿ ಪ್ರದಾನ

ಬೆಂಗಳೂರು, ಸೆ.9: ನಗರದ  ಭಾರತ್ ಜೋಡೋ ಭವನದಲ್ಲಿ ಹಮ್ಮಿಕೊಂಡಿದ್ದ ಶಿಕ್ಷಕರ ದಿನಾಚರಣೆ ಹಾಗೂ ಮಾಜಿ ಪ್ರಧಾನಿ ರಾಜೀವ್ ಗಾಂಧಿ ರಾಜ್ಯ ಮಟ್ಟದ ಶ್ರೇಷ್ಠ ಶಿಕ್ಷಕ ಪ್ರಶಸ್ತಿ ಪ್ರದಾನ ಸಮಾರಂಭವನ್ನು ಕೆಪಿಸಿಸಿ ಅಧ್ಯಕ್ಷರೂ ಆಗಿರುವ ಉಪ‌ ಮುಖ್ಯಮಂತ್ರಿ ಡಿ.ಕೆ ಶಿವಕುಮಾರ್ ಉದ್ಘಾಟಿಸಿದರು.                                 ಈ ಸಂದರ್ಭದಲ್ಲಿ ಮಾತನಾಡಿದ ಅವರು ಗುರು- ಶಿಷ್ಯರ ಸಂಬಂಧ ಅನನ್ಯವಾದದ್ದು. ವಿದ್ಯಾರ್ಥಿಗಳ ಜೀವನ ರೂಪಿಸುವಲ್ಲಿ ಶಿಕ್ಷಕರ ಪಾತ್ರ ಹಿರಿದಾಗಿದೆ ಎಂದು‌ ಹೇಳಿದರು.

  ರಾಜ್ಯದಲ್ಲಿ ಉತ್ತಮ ಶಿಕ್ಷಣ ನೀಡಲು ಹಾಗೂ ಶಿಕ್ಷಕರ ಅಭಿವೃದ್ಧಿಗಾಗಿ ನಮ್ಮ ಸರ್ಕಾರ ಅಗತ್ಯ ಸಹಕಾರವನ್ನು ನೀಡುತ್ತಿದೆ.  ಇಂದಿನ ಸ್ಪರ್ಧಾತ್ಮಕ ಯುಗದಲ್ಲಿ ವಿದ್ಯಾರ್ಥಿಗಳು ಜಾಗತಿಕ ಮಟ್ಟದಲ್ಲಿ ಬೆಳಯಬೇಕಿದ್ದು, ಅವರನ್ನು ಅದಕ್ಕೆ ಸಜ್ಜುಗೊಳಿಸಬೇಕಿರುವುದು ಶಿಕ್ಷಕರ ಕರ್ತವ್ಯವಾಗಿದೆ ಎಂದರು.                   ‌ ‌‌‌‌‌‌‌‌                      ಈ ಹಿನ್ನಲೆಯಲ್ಲಿ ಇಡೀ ದೇಶದಲ್ಲಿ ಶಿಕ್ಷಣ ಕ್ಷೇತ್ರಕ್ಕೆ ಹೆಚ್ಚು ಮಹತ್ವ ನೀಡಲಾಗಿದೆ. ನಮ್ಮ ಕಾಲದ ಶಿಕ್ಷಣ ಪದ್ದತಿಗೂ ಈಗಿನ ಶಿಕ್ಷಣ ಪದ್ಧತಿಗೂ ತುಂಬಾ ವ್ಯತ್ಯಾಸವಿದೆ. ಇದಕ್ಕೆ ನಾವು ಹೊಂದಿಕೊಂಡು ಶಿಕ್ಷಣ ಕಲಿಕೆಗೆ ಆದ್ಯತೆ ನೀಡುತ್ತಿದ್ದೇವೆ ಎಂದು ತಿಳಿಸಿದರು.

ಇದೇ ಸಂದರ್ಭದಲ್ಲಿ  ಬಳ್ಳಾರಿಯ ನಿವೃತ್ತ ಸಮಾಜ‌ಮುಖಿ ಶಿಕ್ಷಕಿ ಮೇರಿ ಸೇಲಿನಾ ಅವರು ಸೇರಿದಂತೆ ‌ರಾಜ್ಯದ‌‌ ಹಲವು ಶಿಕ್ಷಕರು ಮತ್ತು ನಿವೃತ್ತ ಶಿಕ್ಷಕರಿಗೆ ಕೆಪಿಸಿಸಿ ಶಿಕ್ಷಕರ‌ ಘಟಕದ ರಾಜ್ಯಾಧ್ಯಕ್ಷ ಬಸವರಾಜ ಗುರಿಕಾರ‌ ಮತ್ತಿತರ ಗಣ್ಯರು ರಾಜ್ಯಮಟ್ಟದ ರಾಜೀವಗಾಂಧಿ ಉತ್ತಮ‌ಶಿಕ್ಷಕ ಪ್ರಶಸ್ತಿ ನೀಡಿ ಗೌರವಿಸಿದರು.         ‌‌‌‌‌‌‌‌‌‌                                                ಕಾರ್ಯಕ್ರಮದಲ್ಲಿ ಕೆಪಿಸಿಸಿ ಮುಖಂಡರು, ಬಳ್ಳಾರಿಯ ನಿವೃತ್ತ ಮುಖ್ಯ ಶಿಕ್ಷಕ ಹನುಮಂತಪ್ಪ ಮತ್ತಿತರರು ಇದ್ದರು.    —-