ಅನುದಿನ‌ ಕವನ-೧೩೫೪, ಕವಿ: ಕೆ.ಬಿ..ವೀರಲಿಂಗನಗೌಡ್ರ, ಬಾದಾಮಿ

ಕೈ
ಕೆಸರಾಗಿಸಿಕೊಳ್ಳದೆ
ಮೊಸರು ತಿನ್ನುವವನೊರ್ವ
‘ಹೈನುಗಾರಿಕೆ’ ಕೃತಿ ರಚಿಸಿದ್ದಾನೆ.

ಮೈ
ನೋಯಿಸಿಕೊಳ್ಳದೆ
ಅಕ್ಷರಮಾರಿ ಗಳಿಸಿದವನೋರ್ವ
‘ಶ್ರಮ ಸಂಸ್ಕೃತಿ’ ಕೃತಿ ರಚಿಸಿದ್ದಾನೆ.

ಸೈ
ಎಂದು ಕೈ ಹಿಡಿಯದೆ
ನಡುನೀರಿಗೆ ನೂಕಿದವನೋರ್ವ
‘ನುಡಿ ಮತ್ತು ನಡೆ’ ಕೃತಿ ರಚಿಸಿದ್ದಾನೆ.

ಇಂತಿಪ್ಪ
ಕೃತಿಗಳು ಮರು ಮುದ್ರಣದಲ್ಲಿವೆ
ವಚನ ಪರಂಪರೆಯನ್ನೇ ತಿರುಚುತ್ತಿವೆ.


-ಕೆ.ಬಿ..ವೀರಲಿಂಗನಗೌಡ್ರ, ಬಾದಾಮಿ
—–