ನೀನಿರದೆ ಹಸ್ತದ ರೇಖೆಯಲ್ಲಿ
ನೀ ತೊರೆದು ಹೋದಂದಿನಿಂದ;
ನನಗಿಲ್ಲಿ ಕವಿತೆಯೊಂದೇ ಆಸರೆಯಾಗಿದೆ!
ನೀನಿಲ್ಲದೆ ಬೇಗೆ ಬೇಸರದಿಂದ;
ಕವಿತೆಯಲ್ಲೆ ಹುಡುಕುತ್ತಿಹೆ ನಿನ್ನ ಒಲವನ್ನೆ!
ಏನೆಲ್ಲ ಇದ್ದರು ನಾನಿಲ್ಲಿ ಏಕಾಂಗಿ;
ನೀನಿರದೆ ಎದೆ ಉಸಿರಲ್ಲಿ!
ಏನೆಲ್ಲ ಸಿಕ್ಕರು ನನಗಿಲ್ಲವೆ ಖುಷಿ;
ನೀನಿರದೆ ಹಸ್ತದ ರೇಖೆಯಲ್ಲಿ!
ಬಯಸಿದ್ದು ನಿನ್ನ ಸವಿ ಮಾತ ಲಹರಿ!
ಕಣ್ಗಳ ಹೊಳಪಿನ ಝರಿ!
ಯಾಕಿಂತ ತಿರಸ್ಕಾರ ನೋವಿನ ಪರಿ;
ಸಹಿಸಿಕೊಂಡಿಹೆ ವಿರಹದುರಿ!
ಎದುರು ಬೀದಿಯಲ್ಲಿ ನೀ ಕಂಡಾಗಲೆಲ್ಲ;
ಸ್ವರ್ಗವೇ ಎದುರು ಬಂದಂತೆ!
ತನು ಮನದ ಯಾತನೆ ದುಃಖಗಳೆಲ್ಲ;
ಒಮ್ಮೆಗೆೇ ಹಿಂಗಿ ಹೋದಂತೆ!
ಜೊತೆಯಾಗದಿದ್ದರು ಬಾಳ ಹಾದಿಯಲ್ಲಿ;
ಎದುರಾಗುತ್ತಿರು ಬೀದಿ ತಿರುವಲ್ಲಿ!
ಹಾಡುವೆ ನನ್ನೆಲ್ಲ ಒಲವನ್ನು ಕವಿತೆಯಲ್ಲಿ;
ಆಲಿಸು ಮನೆ ಕಿಟಕಿ ಮರೆಯಲ್ಲಿ!
ನೀನೆಂದು ಮಿಂಚಿ ಮಿನುಗುವ ತಾರೆ;
ನಾ ನಿನ್ನ ಬೆಳಕ ಭಿಕ್ಷುಕ!
ಮುಗಿಲ ಹೂವೆ ನಿನಗೆ ಸಾಟಿ ಯಾರೆ;
ನಾ ನಿನ್ನ ಪ್ರೀತಿ ಆರಾಧಕ!
-ಟಿ.ಪಿ.ಉಮೇಶ್, ಹೊಳಲ್ಕೆರೆ
—–