ಆರ್ದ್ರಗೊಳ್ಳದ ಎದೆಯಲ್ಲಿ
ಕವಿತೆ
ಹುಟ್ಟುತ್ತವಾ…
ಕಟ್ಟಿದ ಪದಗಳು
ಹಾರಾಡುತ್ತವಷ್ಟೆ!
ಅಕ್ಷರಗಳ ಹಂಗಿಲ್ಲ
ಆರ್ದ್ರ ಮನಸಿಗೆ
ಅದು ತುಡಿಯುತ್ತದೆ
ಸುತ್ತಲಿನ ನೋವಿಗೆ
ಸಣ್ಣ ಪುಟ್ಟ ಬೆರಗಿಗೆ!
ಮತ್ತೇನಿಲ್ಲ
ಎದೆ ಆರ್ದ್ರಗೊಂಡು ತುಡಿದರೆ
ಕವಿತೆ ಮೊಳೆಯುತ್ತದೆ
ಮರವಾಗಿ
ನೆರಳಾಗುತ್ತದೆ
ಹೂವಾಗಿ ಗಂಧವಾಗುತ್ತದೆ!
-ರಂಹೊ, ತುಮಕೂರು
—–