ಗಝಲ್
ಅಕ್ಷರಸಾಲಿಗೆ ಭೀತಿಯ ಬಿತ್ತಿದರೆ ಸಾಹಿತ್ಯ ಸಾಗುವುದು ಹೇಗೆ
ಸಾಕ್ಷರರಾಗಲು ಪಾಟಿಯ ಹಿಡಿಯದೆ ಸಾಹಿತಿ ಬೀಗುವುದು ಹೇಗೆ
ಜ್ಞಾನದ ಜ್ಯೋತಿಯು ಹೊತ್ತಿ ಬೆಳಗಲು ದೇವಿ ಕೃಪೆಬೇಕಲ್ಲವೇ
ಶಿರವ ಬಾಗದೆ ಭಿತ್ತಿಯಲಿ ಬರಹ ಆಗುವುದು ಹೇಗೆ
ಕವಿಯ ಮನಕೆ ಭಾವನೆಯು ಮೂಡದೆ ಕವನ ಎನಿಸದು
ಕವಿತ್ವ ಪಕ್ವತೆ ಕಾಣದಿರೆ ಕಾವ್ಯ ಸಿಗುವುದು ಹೇಗೆ
ಅರಿವು ಇರಲು ಜಗದಲಿ ಸಾಧನೆ ಹಾದಿಯು ಸುಗಮ
ಗುರಿಯ ಮುಟ್ಟಲು ಇಲ್ಲದಿರೆ ಗುರು ಮಾಗುವುದು ಹೇಗೆ
ಸುಗಂಧ ಕುಸುಮ ವಿಕಸಿಸಿ ಕಂಪು ಎಲ್ಲೆಡೆ ಹರಡಬೇಕು
ಹೊತ್ತಿಗೆ ಕರದಿ ಹಿಡಿಯದೆ ಬಾಳಲಿ ನಗುವುದು ಹೇಗೆ
-ಡಾ. ಸೌಗಂಧಿಕಾ. ವಿ ಜೋಯಿಸ್, ನಂಜನಗೂಡು, ಮೈಸೂರು ಜಿ.