ಅನುದಿನ ಕವನ-೧೩೯೭, ಕವಯಿತ್ರಿ: ಶಾಂತಾ ಪಾಟೀಲ್, ಸಿಂಧನೂರು

ನಿನ್ನ ನೋಡುತ ನನ್ನನೇ ಮರೆಯಬಯಸುವ ಕಡುಮೋಹಿ ನಾ.

ನಿನ್ನ ಬಾಹುಬಂಧನದಿ ಸೆರೆಸಿಕ್ಕು ನನ್ನನೇ ಮರೆಯಬಯುಸುವ ಕಡುಮೋಹಿ ನಾ.

ನಿನ್ನ ಪ್ರೀತಿಯಲಿ ಜಗ ಮರೆತು
ನಿನ್ನದೇ ಜಗವಾಗಬಯಸುವ ಕಡುಮೋಹಿ ನಾ.

ನಿನ್ನ ಲಾಲಿಸುತ ನಿನ್ನ ಮುದ್ದಿಸುತ
ನಿನಗೆ ನಾ ಮಗುವಾಗಿ
ನನಗೆ ನೀ ಮಗುವಾಗುವ ಬಯಸುವ ಕಡುಮೋಹಿ ನಾ.

ನಿನಗೆ ಮುತ್ತಿನ ತುತ್ತುಣಿಸುತ ಸ್ವರ್ಗ ಕಾಲಡಿ ತರುವ ಮಹದಾಸೆ ಹೊಂದಿದ ಕಡುಮೋಹಿ ನಾ.

ದಣಿದು ಬರುವ ನಿನಗೆ ಒಲವುಣಿಸುತ ತಣಿಸಿ ಕುಣಿಸುವ ಮಹದಾಸೆ ಹೊಂದಿದ ಕಡುಮೋಹಿ ನಾ.

ಈ ಉಸಿರಲಿ ನಿನ್ನುಸಿರು ಬೆರೆಸುತ ಜೀವನ್ಮುಖಿಯಾಗುವ ‘ಶಾಂತ’ ಮನದ ತರಂಗಿಣಿಯಂತಹ ಆಸೆ ಹೊತ್ತ ಕಡುಮೋಹಿ ನಾ.

ಇಂತಿ ನಿನ್ನೊಲವು.

-ಶಾಂತಾ ಪಾಟೀಲ್, ಸಿಂಧನೂರು
——