ಬಳ್ಳಾರಿ ಹಳೇ ತಾಲೂಕು ಕಚೇರಿ ಆವರಣಕ್ಕೆ ಶಾಶ್ವತ ಪರಿಷ್ಕಾರ ಯಾವಾಗ? -ಬಳ್ಳಾರಿ ಜಿಲ್ಲಾಧಿಕಾರಿ, ಶಾಸಕರಿಗೆ‌ ಸಾಮಾಜಿಕ‌ ಕಾರ್ಯಕರ್ತ ಮೇಕಲ ಈಶ್ವರ ರೆಡ್ಡಿ ಬಹಿರಂಗ ಪತ್ರ!

ಮಾನ್ಯ ಜಿಲ್ಲಾ ಅಧಿಕಾರಿಗಳು ಹಾಗೂ ಬಳ್ಳಾರಿ ನಗರ ಶಾಸಕರಿಗೆ ವಿನಂತಿ ಮಾಡಿಕೊಳ್ಳುವುದು ಏನೆಂದರೆ,

ನಗರದ ಹೃದಯ ಭಾಗದಲ್ಲಿರುವ ಹಳೇ ತಾಲೂಕ ಕಚೇರಿ ಆವರಣದಲ್ಲಿ ಸುಮಾರು 11 ಸರ್ಕಾರಿ ಕಚೇರಿಗಳಿವೆ. ಇವುಗಳಲ್ಲಿ ಜನ ಸಂಪರ್ಕವಿರುವ ಕೃಷಿ,  ತೋಟಗಾರಿಕೆ, ಉದ್ಯೋಗ ವಿನಿಮಯ ಕಚೇರಿ,  ಧಾರ್ಮಿಕ ದತ್ತಿ ಇಲಾಖೆ ಗ್ರಾಮಾಂತರ ಹಾಗೂ ಬ್ರೂಸ್ ಪೇಟೆ ಪೋಲಿಸ್ ಠಾಣೆ ಇನ್ನು ಮುಂತಾದ ಕಚೇರಿಗಳಿವೆ  ಕಂದಾಯ ಇಲಾಖೆಯ ತಾಲೂಕು ಕಚೇರಿಯ ಸ್ವಲ್ಪ ಭಾಗ ವರ್ಗಾವಣೆಯಾಗಿ ಇನ್ನು ಕೆಲವು ವಿಭಾಗಗಳು ಹಳೆ ತಾಲೂಕ ಕಚೇರಿಯಲ್ಲಿಯೇ ಕಾರ್ಯ ನಿರ್ವಹಿಸುತ್ತಿವೆ.

ದಿನನಿತ್ಯ ಸಾವಿರಾರು ಜನ ಮುಖ್ಯವಾಗಿ ರೈತರು ಬರುವಂತ ಈ ಕಚೇರಿಗಳಿಗೆ ಮಳೆ ಬಂದಾಗ ಹೋಗಿ ಬರಬೇಕಾದರೆ ಕಷ್ಟವಾಗುತ್ತಿದೆ.                                            ಇಷ್ಟೊಂದು ಕಚೇರಿಗಳಿರುವ ಆವರಣದಲ್ಲಿ ಉನ್ನತ ಅಧಿಕಾರಿಗಳು ಈ ಅವ್ಯವಸ್ಥೆ ಬಗ್ಗೆ ಸರ್ಕಾರ ಗಮನಕ್ಕೆ ತಂದಿದ್ದಾರೋ ಇಲ್ಲವೊ ಗೊತ್ತಿಲ್ಲ!    ಮತ್ತು ಹಲವಾರು ವರ್ಷಗಳಿಂದ ಈ ಅವ್ಯವಸ್ಥೆಯನ್ನು ಸರಿಪಡಿಸುವ ಬಗ್ಗೆ ಯಾವ ಉನ್ನತ ಅಧಿಕಾರಿಗಳು ಗಮನ ಹರಿಸದೇ ಇರುವುದು ಶೋಚನೀಯ.

ಪ್ರತಿ ವರ್ಷ ಮಳೆ ಬಂದಾಗ ಈ ವ್ಯವಸ್ಥೆ ಬಗ್ಗೆ ಯಾವ ಪಕ್ಷದ ಆಡಳಿತ ನಾಯಕರು ಕೂಡ ಸರಿಪಡಿಸಲು ಮುಂದೆ ಬಂದಿಲ್ಲ ಆವರಣ ದಲ್ಲಿರುವ ಪ್ರತಿಯೊಂದು ಕಚೇರಿಗಳನ್ನು ಸಂಪರ್ಕಿಸುವ ಮಣ್ಣಿನ ರಸ್ತೆಗಳನ್ನು  ಸಿಮೆಂಟ್ ರಸ್ತೆಗಳಾಗಿ ಪರಿವರ್ತಿಸ ಬೇಕೆಂದು ಕೋರಿ ಕೊಳ್ಳುತ್ತೇನೆ.
ಜತೆಗೆ ಕುಡಿಯುವ ನೀರು, ಮುಖ್ಯವಾಗಿ ಶೌಚಾಲಯ ವ್ಯವಸ್ಥೆ ಮಾಡಬೇಕೆಂದು ಒಬ್ಬ ಸಾಮಾಜಿಕ ಕಾರ್ಯಕರ್ತರಾಗಿ ತಮ್ಮಲ್ಲಿ ಬೇಡಿಕೊಳ್ಳುತ್ತಿದ್ದೇನೆ. ಮಹಾನಗರ ಪಾಲಿಕೆ ಆವರಣದ ಮಾದರಿಯಲ್ಲಿ ಎಷ್ಟೇ ಮಳೆಯಾದರು ಕೂಡ ಒಂದು ಹನಿ ನೀರು ನಿಲ್ಲದ ಹಾಗೆ ಒಳ ಚರಂಡಿ ವ್ಯವಸ್ಥೆ ಮಾಡಬೇಕೆಂದು ತಮ್ಮಲ್ಲಿ ವಿನಂತಿಸಿಕೊಳ್ಳುತ್ತೇನೆ.

-ಮೇಕಲ ಈಶ್ವರ ರೆಡ್ಡಿ,
ಸಾಮಾಜಿಕ ಕಾರ್ಯಕರ್ತ, ಬಳ್ಳಾರಿ
—–