ಚಿತ್ರದುರ್ಗದ ನೆಲ್ಲಿಕಟ್ಟೆಯಲ್ಲಿ ಕನ್ನಡರಾಜ್ಯೋತ್ಸವ

ಚಿತ್ರದುರ್ಗ, ನ.2: ಕನ್ನಡ ನಾಡುನುಡಿಗೆ ಅಪೂರ್ವವಾದ ಇತಿಹಾಸ ಮತ್ತು ಪರಂಪರೆಯಿದೆ. ಕನ್ನಡನಾಡಿನ ಏಕೀಕರಣಕ್ಕಾಗಿ ದುಡಿದ ಮಹನೀಯರನ್ನೆಲ್ಲ ಸ್ಮರಿಸುತ್ತಾ, ಕನ್ನಡನಾಡುನುಡಿಯ ಪ್ರಗತಿಗಾಗಿ ನಮ್ಮದೇ ಆದ ಕಾಣ್ಕೆ ಕೊಡುವಂತಹ ಸೇವೆ ಮಾಡೋಣ ಎಂದು ಖ್ಯಾತ ಸಾಹಿತಿ ಯುಗಧರ್ಮರಾಮಣ್ಣ ಅವರು ಹೇಳಿದರು.              ಅವರು ಜಿಲ್ಲೆಯ ನೆಲ್ಲಿಕಟ್ಟೆನವಗ್ರಾಮದಲ್ಲಿ ಮಾರಕ್ಕಮಾತೆ ಸಂಸ್ಥೆ ಏರ್ಪಡಿಸಿದ್ದ ೬೯ನೇ ಕನ್ನಡ ರಾಜ್ಯೋತ್ಸವ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದರು.
ಕನ್ನಡನಾಡುನುಡಿ ಕುರಿತು ಉಪನ್ಯಾಸ ನೀಡಿದ ಕುವೆಂಪು ವಿಶ್ವವಿದ್ಯಾಲಯದ ಡಾ.ಬಿ.ಆರ್.ಅಂಬೇಡ್ಕರ್ ಅಧ್ಯಯನ ಕೇಂದ್ರದ ನಿರ್ದೇಶಕ ಡಾ.ನೆಲ್ಲಿಕಟ್ಟೆ ಎಸ್.ಸಿದ್ದೇಶ್ ಅವರು ಕನ್ನಡಸಾಹಿತ್ಯ ಮತ್ತು ಸಂಸ್ಕೃತಿಯಲ್ಲಿ ಸಾಮರಸ್ಯದ ನೆಲೆಯಿದೆ. ಸಾತ್ವಿಕತೆಯಸೆಲೆಯಿದೆ. ಕನ್ನಡ ನಾಡುನುಡಿಯ ಸಂವರ್ಧನೆಗೆ ಸರ್ವರ ಶ್ರಮಿಸಬೇಕೆಂದು ತಿಳಿಸಿದರು. ಇದೇ ಸಂದರ್ಭದಲ್ಲಿ ಬಿದರಕೆರೆ ಶಕುಂತಲ ತಿಪ್ಪೇಸ್ವಾಮಿ ಅವರಿಗೆ ಸನ್ಮಾನಿಸಲಾಯಿತು. ಮುಖ್ಯ ಅತಿಥಿಯಾಗಿ ಬೆಂಗಳೂರು ಬೌರಿಂಗ್ ಆಸ್ಪತ್ರೆಯ ನವೀನ್ ಎಸ್.ಟಿ. ಅವರು ಭಾಗವಹಿಸಿದ್ದರು.