ಸಂಸ್ಕೃತಿ ಉಳಿಸಿ ಬೆಳೆಸುವಲ್ಲಿ ಪೋಷಕರ ಪಾತ್ರ ಅನನ್ಯ – ಅಲ್ಲಂ‌ ಪ್ರಶಾಂತ್

ಬಳ್ಳಾರಿ, ನ.4: ನಮ್ಮ ಸಂಸ್ಕೃತಿಯನ್ನು ಉಳಿಸಿ ಬೆಳೆಸುವಲ್ಲಿ ಪೋಷಕರ ಪಾತ್ರ ಅನನ್ಯ ಎಂದು ಜಿಲ್ಲಾ ಕಾಂಗ್ರೆಸ್ ಸಮಿತಿ ಅಧ್ಯಕ್ಷ ಅಲ್ಲಂ ಪ್ರಶಾಂತ್ ಅವರು ಅಭಿಪ್ರಾಯ ವ್ಯಕ್ತ ಪಡಿಸಿದರು.                                                    ಬಳ್ಳಾರಿ ಕಲ್ಚರಲ್ ಆಕ್ಟಿವಿಟೀಸ್ ಅಸೋಸಿಯೇಷನ್ ವತಿಯಿಂದ ನಗರದ ಹೊಂಗಿರಣ ರಂಗಮಂದಿರದಲ್ಲಿ ಏರ್ಪಡಿಸಿದ ರಾಜ್ಯೋತ್ಸವ ಸಾಂಸ್ಕ್ರತಿಕ ಸಂಭ್ರಮ 2024 ಕಾರ್ಯಕ್ರಮದಲ್ಲಿ ಪಾಲ್ಗೊಂಡು ಅವರು ಮಾತನಾಡಿದರು. ನಮ್ಮ ಸಂಸ್ಕೃತಿ ಉಳಿಸಲು ಅಸೋಸಿಯೇಷನ್ ಒಳ್ಳೆ ಕೆಲಸ ಮಾಡುತಿದೆ ಎಂದರು.                                ಕಲೆಗಳಿಂದ ಉತ್ತಮ ಸಂಪ್ರದಾಯ ನಿರ್ಮಾಣ ಆಗುತ್ತೆ ಎಂದು ಹೇಳಿದರು.                                            ಪಾಲಿಕೆ ಮೇಯರ್ ಮುಲ್ಲಂಗಿ ನಂದೀಶ್ ಮತಾನಾಡಿ,  ಸಾಂಸ್ಕೃತಿಕ ಕಲೆಗಳನ್ನು ಮುಂದಿನ ಪೀಳಿಗೆಗೆ ಪರಿಚಯಿಸುವ  ಸಂಸ್ಥೆ ಉತ್ತಮ  ಕೆಲಸ ಮಾಡುತಿ ರುವುದು ಅಭಿನಂದನೀಯ ಎಂದರು .                        ಈ ಸಂದರ್ಭದಲ್ಲಿ ಮಲ್ಲಂಗಿ ನಂದೀಶ್, ಅಲ್ಲಂ ಪ್ರಶಾಂತ್, ರಾಮಚಂದ್ರ, ಟಿ.ನಾಗಭೂಷಣ್, ಮಂಜುನಾಥ್ ಅವರನ್ನು ಸನ್ಮಾನಿಸಲಾಯಿತು.                                          ನಂತರ ರಂಗಾರೆಡ್ಡಿ ತಂಡದಿಂದ ಸುಗಮ ಸಂಗೀತ, ರಾಮಚಂದ್ರ ತಂಡದಿಂದ ಯಾರಿಗೆ ಬೇಕು ನಿನ್ನ ಕವಿತೆ ಹಾಸ್ಯ ನಾಟಕ, ತುಂಗಾ ಗಂಗಾ ಸಾಂಸ್ಕೃತಿಕ ಕಲಾ ಟ್ರಸ್ಟ್ ವತಿಯಿಂದ ನೃತ್ಯ ಪ್ರದರ್ಶನ ಪ್ರೇಕ್ಷಕರ ಮೆಚ್ಚುಗೆಗೆ ಪಾತ್ರವಾಯಿತು.                                                ಬಿಸಿಎಎ ಅದ್ಯಕ್ಷ ಬ್ರಹ್ಮಯ್ಶ ಸ್ವಾಗತಿಸಿದರು. ರಂಗ ಕಲಾವಿದ ನಾಗಭೂಷಣ್ ನಿರೂಪಿಸಿದರು. ಮಲ್ಲೇಶ್ ವಂದಿಸಿದರು. ಕಲಾವಿದರಿಗೆ ಪ್ರಶಂಸೆ ಪತ್ರ ನೀಡಿ ಸನ್ಮಾನಿಸಲಾಯಿತು. ಕಾರ್ಯ್ರಮದಲ್ಲಿ ಸಂಸ್ಥೆಯ ಕಾರ್ಯದರ್ಶಿ ಯಶ್ವಂತ್ ರಾಜ್, ಸಹ ಕಾರ್ಯದರ್ಶಿ ಪ್ರಕಾಶ್, ರಾಮಮೂರ್ತಿ, ಶೇಶಾರೆಡ್ಡಿ, ಟಿಹೆಚ್ ಎಂ. ಬಸವರಾಜ್, ಮಂಜು, ಚಂದ್ರಶೇಖರ ಸ್ವಾಮಿ, ಶ್ರೀನಿವಾಸ, ಭೀಮನೇನಿ ಪ್ರಸಾದ್, ಬಾಸ್ಕರ ನಾಯುಡು, ಯರ್ರಿಸ್ವಾಮಿ, ಮಂಜುನಾಥ್, ಶಿವಾಜಿ ರಾವ್ ತಿವಾರಿ, ವೀಣಾ  ಮುಂತಾದವರು ಇದ್ದರು.