ನನ್ನ ಸಾವಿನೊಂದಿಗೆ ನಿನ್ನ ನೆನಪುಗಳ ಸಾವು!
ನಮ್ಮ ಪ್ರೀತಿಗಿಲ್ಲವೇ ಸಾವು?!
ನಿನ್ನ ನೆನಪುಗಳ ಚೈತನ್ಯಕ್ಕಿಲ್ಲವೇ ಸಾವು!
ನಿನ್ನ ಪ್ರೀತಿಸುವುದಷ್ಟೆ ನನಗೆ ಗೊತ್ತು!
ನಿನ್ನ ಒಪ್ಪಿಗೆಯದು ಕಣ್ಗಳ ಕಂಬನಿಯಲ್ಲಿ ಇತ್ತು!
ಮತ್ತೇಕೆ ಮಾತಿನ ವ್ಯರ್ಥಾಲಾಪ;
ಹಾಡುವೆನು ಜೀವವಿರುವವರೆಗು ಸುಮ್ಮನೇ ಕೇಳು;
ನಮ್ಮ ಅಮರ ಪ್ರೀತಿಯ ಆಲಾಪ!
ನಿನ್ನ ಸಾಯಗೊಡುವುದಿಲ್ಲ ನನ್ನೆದೆಯ ಉಸಿರುವವರೆಗು!
ಪ್ರೀತಿಯೆಂದರೇ ನೀನು!
ನಿನ್ನ ಹಾಡಿ ಹಾಡಿ ಉಳಿಸುವೆನು;
ಜಗತ್ತಿಗೆ ನಿನ್ನ ಪ್ರೀತಿಯ ಶಕ್ತಿ ತೋರುವೆನು!
ದೂರವಿದ್ದಾಕ್ಷಣ ಪ್ರೀತಿ ವಿರಹವಲ್ಲ!
ಹತ್ತಿರವಿರಲು ಪ್ರೀತಿ ಸಲುಗೆಯಲ್ಲ!
ನಮ್ಮ ನಿತ್ಯ ಬದುಕಿನಲ್ಲಿದೆ ಪ್ರೀತಿ!
ಜೀವನ ಸಾಧನೆಯೆಡೆಗೆ ಅದೇ ನೀತಿ!
ನೀ ಇರು….. ಇಲ್ಲದಿರು!
ನನ್ನಲ್ಲಿ ನೀನೆಂದು ನಿಲ್ಲದಾ ಉಸಿರು!
ನನ್ನ ಬದುಕಿನಲ್ಲಿ ನೀ ಅಳಿಸದ ಹೆಸರು!
ಸಾವು
ಆಗಬಹುದು ನನ್ನೊಳಗಿನ ಪ್ರೀತಿಗೆ ಕೊನೆ ನಿಲ್ದಾಣ!
ನೀನು
ನನ್ನ ಅಳಿಯಲು ಬಿಡದಿಹ ಪ್ರೀತಿಸಂಜೀವಿನಿ ತಾಣ!
ನೀನಿರಲು
ಪ್ರೀತಿಗೆ ನಿತ್ಯೋತ್ಸವ!
ನನ್ನೊಳಗೆ ಜೀವನೋತ್ಸಾಹ!
ಮತ್ತೇಕೆ ಸಾವ ಭಯ?
ನೀನಿರಲು ಪ್ರೀತಿಗೆ ನಿರ್ಭಯ!
ನನ್ನ ಬದುಕಿಗೆ ನಿನ್ನದೇ ಅಭಯ!
ಬಾ ಒಲವೆ ಮತ್ತೆ ಮತ್ತೆ!
ನೀನಿರಲು ನನ್ನ ಮುಂದೆ;
ಸಾವೆಂಬ ಮಾಯೆಯ ಛಾಯೆಯು ಇರದು ನನ್ನ ಹಿಂದೆ!
-ಟಿ.ಪಿ. ಉಮೇಶ, ಹೊಳಲ್ಕೆರೆ
—–