ಗಂಡಸರಾದ ನಮಗೆ…
ಅವಳ ನೋವ ಕುರಿತು
ಹೇಳುವುದು
ಎರಡು ಸಾಲಿನ ಪದ್ಯ ಗೀಚಿದಷ್ಟು
ಸುಲಭವಲ್ಲ…
ಪ್ರತಿ ತಿಂಗಳು
ಋತುಸ್ರಾವದಿ
ಅವಳು ಅನುಭವಿಸುವ
ನರಕ ಸದೃಶ ನೋವು
ಗಂಡಸರಾದ ನಮಗೆ
ಅಷ್ಟು ಸುಲಭಕ್ಕೆ ಅರ್ಥವಾಗುವುದಿಲ್ಲ…
ಆಗಾ ಅವಳಿಗೆ ವಿಶ್ರಾಂತಿ ಬೇಕು
ಸಾಂತ್ವನಬೇಕು
ಹಾರೈಕೆ ಬೇಕು
ಬೆನ್ನೆಲುಬಾಗಿ ನಿಲ್ಲೋ ಬಂಧು ಬೇಕು…
ಅವಳು ಅರಸುವ
ಪ್ರೀತಿಯ ತೋಳು
ಅವಳ ಸುಸ್ತನ್ನು ಕಡಿಮೆಗೊಳಿಸುವ
ಜೀವ ನಿರೋಧಕ
ಜಗವೆ ಬೇಡವೆನಿಸುವ
ಆ ಮೂರ್ನಾಲ್ಕು ದಿನ
ಅವಳು ಆ ಮುಟ್ಟನ್ನು ಗೆಲ್ಲಲು
ಅವಳ ದೇಹದೊಡನೆ
ಪ್ರತಿಕ್ಷಣ ಹೋರಾಡುವ ಯುದ್ಧ…
-ಸಿದ್ದು ಜನ್ನೂರ್, ಚಾಮರಾಜನಗರ
—–