ಶುಭ ವಿವಾಹ: ಗುರು‌-ಹಿರಿಯರ ಸಮ್ಮುಖದಲ್ಲಿ‌ ಚತುರ್ಭುಜರಾದ ಕವನ ವಿ.ಎಮ್ ಮತ್ತು ಶ್ರೀನಿಧಿ ಓರುವಾಯಿ

ಬಳ್ಳಾರಿ, ನ.6: ಬಳ್ಳಾರಿ ಮೂಲದ ಪ್ರಸ್ತುತ ಬೆಂಗಳೂರಿನಲ್ಲಿ ವಾಸಿಸುತ್ತಿರುವ ಎಲ್ ಐ ಸಿ‌ ನಿವೃತ್ತ ಅಧಿಕಾರಿ, ಕವಿ ವಿ ಆರ್ ಮರುಳೀಧರ ಹಾಗೂ ಎಲ್‌ ಐಸಿ ಉದ್ಯೋಗಿ ಚಂದ್ರಿಕಾ ವಿ ಎಮ್ ಅವರ ದ್ವೀತಿಯ ಪುತ್ರಿ ಕವನ ವಿ ಎಮ್ ಅವರ ವಿವಾಹವು ಶ್ರೀನಿಧಿ ಓರುವಾಯಿ ಅವರೊಂದಿಗೆ ಬುಧವಾರ ಗುರುಹಿರಿಯರ ಸಮ್ಮುಖದಲ್ಲಿ‌ ನೆರವೇರಿತು.
ನಗರದ ಮೋಕ‌ ರಸ್ತೆಯಲ್ಲಿರುವ ಕೆ.ಆರ್ ಎಸ್ ಫಂಕ್ಷನ್ ಹಾಲ್ ನಲ್ಲಿ ಜರುಗಿದ ವಿವಾಹ ಮಹೋತ್ಸವದಲ್ಲಿ ನವ ವಧು ವರರ ಎರಡು ಕುಟುಂಬಗಳ ನೂರಾರು ಜನ ಬಂಧು ಮಿತ್ರರು ಸಕುಟುಂಬ ಸಪರಿವಾರ ಸಮೇತರಾಗಿ ಮದುವೆಗೆ ಆಗಮಿಸಿ ನವ ಜೋಡಿಗಳನ್ನು ಆಶೀರ್ವದಿಸಿದರು.
ಕರ್ನಾಟಕ‌ ಗ್ರಾಮೀಣ ‌ಬ್ಯಾಂಕಿನ ನಿವೃತ್ತ ಅಧಿಕಾರಿ ಓರುವಾಯಿ ನರಸಿಂಹ ಪ್ರಸಾದ್ ಮತ್ತು ರಾಧಾರಾಣಿ ಅವರ ಪುತ್ರ ಶ್ರೀನಿಧಿ‌ ಓರುವಾಯಿ ಅವರು ಜರ್ಮನಿಯಲ್ಲಿ‌ ಉದ್ಯೋಗದಲ್ಲಿದ್ದಾರೆ.

ಎಲ್ಐಸಿ ಹಾಗೂ ಕೆಜಿಬಿಯ ಹಾಲಿ‌ ಹಾಗೂ ನಿವೃತ್ತ ಅಧಿಕಾರಿ ಸಿಬ್ಬಂದಿಗಳು, ಗಣ್ಯರು ವಿವಾಹ ಸಮಾರಂಭದಲ್ಲಿ ಖುಷಿಯಿಂದ ಪಾಲ್ಗೊಂಡಿದ್ದರು.
ನೂರಾರು ಬಂಧು ಮಿತ್ರರ ಜತೆ ಚಂದ್ರಿಕಾ ಅವರ ಅವರ ಕಾಲೇಜು ಸಹಪಾಠಿಗಳು ತಮ್ಮ ಕುಟುಂಬದ ಸದಸ್ಯರೊಂದಿಗೆ 35 ವರ್ಷಗಳ ಬಳಿಕ ಮದುವೆಯ ಸಂಭ್ರಮದಲ್ಲಿ ಭಾಗವಹಿಸಿ ನವ ಯುವ ದಂಪತಿಯನ್ನು ಆಶೀರ್ವದಿಸಿದ್ದು ಗಮನ ಸೆಳೆಯಿತು.

ಶುಭ ಕೋರಿದ ಸಹಪಾಠಿಗಳು: ಹೊಸಪೇಟೆ ವಿಜಯನಗರ ಕಾಲೇಜಿನ‌ ಬಿ.ಕಾಂ ಸಹಪಾಠಿಗಳಾದ ದಾವಣಗೆರೆಯ ವೆಂಕಟೇಶ್ ಪಟಿಗಿ, ಹೊಸಪೇಟೆಯ ರಮೇಶ್ ಕಂಟ್ಲಿ, ತುಳಸಿ, ಎಂ. ಶ್ರೀನಿವಾಸ, ಪ್ರಭುದೇವ ಜಾಲಿ, ಹಗರಿಬೊಮ್ಮನಹಳ್ಳಿಯ ರೇಣುಕಾ,  ಮುನಿರಾಬಾದಿನ ಶೈಲಜಾ, ವಿಜಯಪುರದ ದಿಲ್ ಶಾದ್ ಬೇಗಂ, ಬಳ್ಳಾರಿಯ ಸುಮ ಮತ್ತು ಪ್ರೊ. ಸುರೇಶ್ ದಂಪತಿ, ಎಎಂ ವಿಶಾಲ ಮತ್ತು ಸಿ. ಮಂಜುನಾಥ್ ನವಜೋಡಿಗೆ ಶುಭ ಕೋರಿದರು.
*****