ಭವರೋಗ ಗೆಲ್ಲುವ ಸಾಧನಗಳಲ್ಲೊಂದು ಭಜನೆ -ಡಾ.ನೆಲ್ಲಿಕಟ್ಟೆ ಎಸ್.ಸಿದ್ದೇಶ್

ಚಿತ್ರದುರ್ಗ, ನ.9:  ತಾಲ್ಲೂಕಿನ ಭರಮಸಾಗರ ಹೋಬಳಿ ನವಗ್ರಾಮ ನೆಲ್ಲಿಕಟ್ಟೆಯಲ್ಲಿ ಮಾರಕ್ಕಮಾತೆ ಸಂಸ್ಥೆ ಶನಿವಾರ ಭಜನ ಕಾರ್ಯಕ್ರಮ ಏರ್ಪಡಿಸಿತ್ತು.                           ಕಾರ್ಯಕ್ರಮದಲ್ಲಿ ಭಾಗವಹಿಸಿದ್ದ  ಕುವೆಂಪು ವಿಶ್ವವಿದ್ಯಾಲಯದ ಡಾ.ಬಿ.ಆರ್.ಅಂಬೇಡ್ಕರ್ ಅಧ್ಯಯನ ಕೇಂದ್ರದ ನಿರ್ದೇಶಕ ಡಾ.ನೆಲ್ಲಿಕಟ್ಟೆ ಎಸ್.ಸಿದ್ದೇಶ್ ಅವರು  ಮಾತಬಾಡಿ, ಭಜನೆ ಮಾಡುವುದರಿಂದ ಭಜನೆ ಕೇಳುವುದರಿಂದ ಮಾನಸಿಕ ಒತ್ತಡವಿರುವುದಿಲ್ಲ. ಭಜನೆ ಒಂದು ರೀತಿ ಬಿ.ಪಿ. ಟ್ಯಾಬ್ಲೆಟ್ ಇದ್ದಂತೆ ಎಂದು ಅಭಿಪ್ರಾಯ ಪಟ್ಟರು.                                        ಹಿಂದಿನ ದಿನಗಳಲ್ಲಿ ಪ್ರತಿ ಹಳ್ಳಿಗಳಲ್ಲಿ ಭಜನೆ ಮಾಡುತ್ತಿದ್ದರು. ಆದ್ದರಿಂದ ಅವರಿಗೆ ಬಿ.ಪಿ.ಆಗಲಿ, ಶುಗರ್ ಆಗಲಿ ಬರುತ್ತಿರಲಿಲ್ಲ. ಇವತ್ತು ರೋಗಗಳ ಗೂಡಾಗುತ್ತಿರುವುದು ನಮ್ಮಗಳ ಮಾನಸಿಕ ಒತ್ತಡವೇ ಕಾರಣವಾಗಿದೆ ಎಂದರು.                                ಭವರೋಗ ಗೆಲ್ಲುವ ಸಾಧನಗಳಲ್ಲೊಂದು ಭಜನೆ ಎಂದು ಹೇಳಿದರು.                                                        ಇದೇ ಸಂದರ್ಭದಲ್ಲಿ  ಸಂಸ್ಥೆಯ ಅಧ್ಯಕ್ಷ ಎಸ್.ಮಂಜಮ್ಮ ಮಂಜಣ್ಣ ಅವರು ಮಠದ ದ್ಯಾಮವ್ವನಹಳ್ಳಿ ಶ್ರೀ ಚೌಡೇಶ್ವರಿ ಭಜನಾ ಮಂಡಳಿ ಗೆ ಹಾರ್ಮೋನಿಯಂ ಕಾಣಿಕೆಯಾಗಿ ನೀಡಿದರು.                                                          ನಿತ್ಯ ಭಜನೆ ಮಾಡುವ ಮೂಲಕ ನಮ್ಮ ಊರುಗಳಲ್ಲಿ ನೆಮ್ಮದಿಯಿಂದ ಬಾಳಲು ಸಾಧ್ಯವಾಗುತ್ತದೆ ಎಂದು ತಿಳಿಸಿದರು.                                                  ಖಜಾಂಚಿ ಸಿ.ಎಂ.ನೇತ್ರಾವತಿ ಸ್ವಾಗತಿಸಿದರು. ತಮ್ಮಣ್ಣ, ಕಂಪಳೇಶ್, ಬಸವರಾಜ್, ಮಹೇಶ್, ಓಬಳೇಶ್, ಏಕಾಂತ್ ಮೊದಲಾದವರು ಭಾಗವಹಿಸಿದ್ದರು.