ಶುಭ ವಿವಾಹ: ಗುರು‌-ಹಿರಿಯರು, ಬಂಧುಮಿತ್ರರ ಶುಭ ಹಾರೈಕೆಯೊಂದಿಗೆ ನವಜೋಡಿಯಾದ ರೋಹಿತ್ ಆರ್ ಕಂಟ್ಲಿ‌ ಮತ್ತು ಟೀನಾ ಭಾಗ್ಯ

ಹೊಸಪೇಟೆ, ನ.18: ನಗರದ ನ್ಯೂ ಅಮರಾವತಿಯ ರಾಘವೇಂದ್ರ ಕಾಲೋನಿಯ ನಿವಾಸಿ ಜಿಂದಾಲ್ ಸಂಸ್ಥೆಯ ಉಪ‌ ವ್ಯವಸ್ಥಾಪಕ ರಮೇಶ್ ಕಂಟ್ಲಿ ಮತ್ತು ಅಧ್ಯಾಪಕಿ ಶ್ರೀಗೌರಿ ಅವರ ಜೇಷ್ಠ ಪುತ್ರ ಬಿ.ಇ ಪದವೀಧರ ರೋಹಿತ್ ಅವರ‌ ವಿವಾಹ ವಿಜಯಪುರದ ಟೀನಾ ಭಾಗ್ಯ ಅವರೊಂದಿಗೆ ಭಾನುವಾರ ಗುರುಹಿರಿಯರು, ಬಂಧುಮಿತ್ರರ ಸಮ್ಮುಖದಲ್ಲಿ‌ ವಿಜೃಂಭಣೆಯಿಂದ ನೆರವೇರಿತು.
ನಗರದ ಟಿ.ಬಿ ಡ್ಯಾಂ ರಸ್ತೆಯಲ್ಲಿರುವ ಶ್ರೀ ಸಾಯಿಲೀಲಾ ಕಲ್ಯಾಣ ಮಂಟಪದಲ್ಲಿ ಜರುಗಿದ ವಿವಾಹ ಮಹೋತ್ಸವದಲ್ಲಿ ನವ ವಧು ವರರ ಎರಡು ಕುಟುಂಬಗಳ ನೂರಾರು ಜನ ಬಂಧು ಮಿತ್ರರು ಸಕುಟುಂಬ ಸಪರಿವಾರ ಸಮೇತರಾಗಿ ಮದುವೆಗೆ  ಆಗಮಿಸಿ ನವ ವಧುವರರನ್ನು ಆಶೀರ್ವದಿಸಿದರು.
ವಿಜಯಪುರದ ಶ್ರೀಮತಿ ಭಾರತಿ ಮತ್ತು ನರೇಂದ್ರ ರಾ ಬಣ್ಣದ ಅವರ ಪುತ್ರಿ ಟೀನಾ ಭಾಗ್ಯ ಬಿಇ(ಸಿಎಸ್) ಪದವಿ ಪಡೆದಿದ್ದಾರೆ.


ಜಿಂದಾಲ್ ಸಂಸ್ಥೆ, ರೋಹಿತ್ ಅವರ ಎಸ್.ಬಿಐಯ ಸಹೋದ್ಯೋಗಿಗಳು, ಅಧಿಕಾರಿ ಸಿಬ್ಬಂದಿಗಳು‌ ವಿವಾಹ ಮಹೋತ್ಸವದಲ್ಲಿ ಸಂಭ್ರಮದಿಂದ ಪಾಲ್ಗೊಂಡಿದ್ದರು.
ನೂರಾರು ಬಂಧು ಮಿತ್ರರ ಜತೆ ರಮೇಶ್ ಕಂಟ್ಲಿ ಹಾಗೂ ಶ್ರೀಗೌರಿ ಅವರ ಶಾಲಾ ಕಾಲೇಜು ಸಹಪಾಠಿಗಳು ತಮ್ಮ ಕುಟುಂಬದ ಸದಸ್ಯರೊಂದಿಗೆ ಮೂರುವರೆ ದಶಕಗಳ ಬಳಿಕವೂ ಮದುವೆಯ ಸಂಭ್ರಮದಲ್ಲಿ ಭಾಗವಹಿಸಿ ನವ ಯುವ ದಂಪತಿಯನ್ನು ಆಶೀರ್ವದಿಸಿದ್ದು ಗಮನ ಸೆಳೆಯಿತು.
ಶುಭ ಕೋರಿದವರು: ರಮೇಶ್ ಕಂಟ್ಲಿ ಸಹಪಾಠಿಗಳಾದ
ಹೊಸಪೇಟೆ ವಿಜಯನಗರ ಕಾಲೇಜಿನ‌ ದಾವಣಗೆರೆಯ ವೆಂಕಟೇಶ್ ಪಟಿಗಿ, ಅನಿತಾ ನಾಡಿಗೆರ್, ನಾಗರತ್ನ, ಬೆಂಗಳೂರಿನ ನಂದ(ನಂದಿನಿ) ಮಧುಸೂದನ್,   ಹೊಸಪೇಟೆಯ ತುಳಸಿ,  ಎಂ. ಶ್ರೀನಿವಾಸ ದಂಪತಿ, ರಮಾಶಂಕರ ಶೆಟ್ಟಿ ದಂಪತಿ, ಪ್ರಭುದೇವ ಜಾಲಿ ದಂಪತಿ, ಆಶಾಗೀತಾ, ಅರುಣಿ ಮಲ್ಲಿಕಾರ್ಜುನ ದಂಪತಿ, ಸುರೇಶ್ ಕುಮಾರ್, ವಿರೂಪಾಕ್ಷ ಕುಡುತಿನಿ, ಬಸವರಾಜ್ ರಾಜೂರ್, ವಸ್ತಿ ನಾಗರಾಜ್ ಶೆಟ್ಟಿ, ಪಾಂಡುರಂಗ ಪುಣ್ಯಮೂರ್ತಿ, ಮಂಜುನಾಥ್ ಮನ್ಸಾಲಿ, ಪುರುಷೋತ್ತಮ್, ಹಗರಿಬೊಮ್ಮನಹಳ್ಳಿಯ ರೇಣುಕಾ,  ವಿಜಯಪುರದ ದಿಲ್ ಶಾದ್ ಬೇಗಂ, ತಾಡಪತ್ರಿಯ ಸರೋಜ, ಬಳ್ಳಾರಿಯ ಸುಮ ಮತ್ತು ಪ್ರೊ. ಸುರೇಶ್ ದಂಪತಿ, ಎಎಂ ವಿಶಾಲ ಮತ್ತು ಸಿ. ಮಂಜುನಾಥ್ ದಂಪತಿ ಹಾಗೂ ಹೈಸ್ಕೂಲ್ ಸಹಪಾಠಿ ಎಎಸ್ಐ ಮಲ್ಲೇಶ್ ದಳವಾಯಿ ದಂಪತಿ ಮತ್ತಿತರರು ನವಜೋಡಿಗೆ ಶುಭ ಕೋರಿದರು.


*****