ಜನುಮದಾತರು…
ಆ ಮಡಿಲು
ಆ ಹೆಗಲು
ಒಂದು ಸ್ವರ್ಗ
ಒಂದು ಗುರಿ
ಬಾಳುವ ರೀತಿಗೆ ಸುಂದರ ಬೆಳಕು ಚೆಲ್ಲುವ ಕಿರಣಗಳು…
ಎರಡು ಕಣ್ಣುಗಳು
ನಕ್ಷತ್ರ ಪುಂಜಗಳು
ಕನಸ ಕಾಣಲು ನನಸು ಮಾಡುವ ಕೈಗಳು
ಬಾಳ ಬಂಡಿಗಳು
ಸಾಗುವ ಹೂಗಳು
ಏಳು ಬೀಳು ದಾಟಿ ಸಾಗೋ ನದಿಗಳು
ಏನೇ ಸಿಗಲಿ ಎಲ್ಲ ಕೆಡವಿ
ತುತ್ತು ನೀಡಿ ದಡವ ಮುಟ್ಟಿ
ಮುನ್ನುಗ್ಗುವ ಯಶದ ನಮ್ಮ ಮೊದಲ ಗುರುಗಳು…
ನೋವ ತೂರಿ
ನಗುವ ತಾಯಿ
ಮನೆಗೆ ನಿತ್ಯ ಬೆಳ್ದಿಂಗಳ ಮುಡಿಸಿ
ಕಷ್ಟ ದಾರಿ
ತುಳಿದು ಅಪ್ಪ
ಬೆವರ ಬಸಿದು ಅನ್ನ ಕೊಡೋ ಕಾವಲಿಗ
ನೊಂದು ಬೆಂದು ಹಸಿದರೂನು
ನಗುವನೆಂದು ಮೊಗದಿ ಹೊತ್ತು
ಬಾಳಿಗರ್ಥ ಕೊಟ್ಟ ನನ್ನ ಜನುಮದಾತರು…
-ಸಿದ್ದು ಜನ್ನೂರ್, ಚಾಮರಾಜನಗರ