ಹೆಣ್ಣು ಮಕ್ಕಳ ನಗು
ಚಿಕ್ಕಂದಿನಲಿ
ಶಾಲೆಯಲಿ ಪಾಠವೊಂದಿತ್ತು
“ದೇವರ ನಗು”
ಈ ಮನುಷ್ಯ
ನಾನು, ನನ್ನದು ಎಂಬ
ಅಜ್ಞಾನದಿಂದ,
ಆಹಂಕಾರದಿಂದ ವರ್ತಿಸಿದಾಗಲೆಲ್ಲಾ
ದೇವರು ನಗುತ್ತಾನಂತೆ…
ಈಗೂಂದು ಜಿಜ್ಞಾಸೆ…
ಈ ಹೆಣ್ಣುಮಕ್ಕಳು ಯಾವಾಗ
ಮನಸೊಯಿಚ್ಛೆ ನಗಬಹುದು
ಅವರ ವಸ್ತ್ರ ಸಂಹಿತೆ ಬಗ್ಗೆ
ಗಂಡಸು ಅಪಾರ ಕಾಳಜಿ ತೊರಿಸುತ್ತಾ
ಮಾರ್ಗಸೂಚಿ ರೂಪಿಸುವಾಗ…
ಹೆಣ್ಣುಮಕ್ಕಳ ಸ್ವಾತಂತ್ರ್ಯದ ಬಗ್ಗೆ
ಗಂಡಸರು ಹೋರಾಟ ರೂಪಿಸುವಾಗ…
ಯಾವುದು ಫೇಮಿನಿಸಂ!? ಯಾವುದು ಅಲ್ಲ?!
ಎಂದು ಸೆಮಿನಾರುಗಳಲ್ಲಿ ಕೂದಲು ಸೀಳುವಾಗ…
ಸ್ತ್ರೀ ಮಿಸಲಾತಿ ಬಗ್ಗೆ
ಅಪಾರ ಕರುಣೆಯಿಂದ ಗಂಡಸರನೇಕರು
ಭಾಷಣ ಬೀಗಿಯುವಾಗ…..
ಹೀಗೆ ಅನೇಕ ಸಂದರ್ಭದಲ್ಲಿ
ಹೆಣ್ಣುಮಕ್ಕಳು ಗಹಗಹಿಸುತ್ತಾ ಹೇಳುತ್ತಾರೆ…
Oh Men fuck off!
mind your own bloody business!!
-ವಿದ್ಯಾಶಂಕರ ಹರಪನಹಳ್ಳಿ, ಬೆಂಗಳೂರು
—–