ಹುಬ್ಬಳ್ಳಿ: ಹೆಸ್ಕಾಂ ಅಧ್ಯಕ್ಷರಾಗಿ ಸೈಯದ್ ಅಜೀಂ ಪೀರ್ ಖಾದ್ರಿ‌ ಅಧಿಕಾರ‌ ಸ್ವೀಕಾರ

ಹುಬ್ಬಳ್ಳಿ, ನ.30: ಹೆಸ್ಕಾಂ ಅಧ್ಯಕ್ಷರಾಗಿ ಸೈಯದ್ ಅಜೀಂ ಪೀರ್ ಖಾದ್ರಿ‌ ಅವರು ಶುಕ್ರವಾರ ಅಧಿಕಾರ‌ ಸ್ವೀಕರಿಸಿದರು. ಈ ಸಂದರ್ಭದಲ್ಲಿ ಲೋಕೋಪಯೋಗಿ ಸಚಿವ ಸತೀಶ್ ಜಾರಕಿಹೊಳಿ, ವಸತಿ‌ಸಚಿವ ಬಿ.ಝೆಡ್. ಜಮೀರ್ ಅಹ್ಮದ್ ಖಾನ್, ಮುಖ್ಯಮಂತ್ರಿ ರಾಜಕೀಯ ಕಾರ್ಯದರ್ಶಿ ನಸೀರ್ ಅಹ್ಮದ್, ಶಾಸಕರಾದ ಪ್ರಸಾದ್ ಅಬ್ಬಯ್ಯ, ಯಾಸೀರ್ ಖಾನ್ ಪಠಾನ್ ಹಾಗೂ ಮತ್ತಿತರ ಮುಖಂಡರು ಉಪಸ್ಥಿತರಿದ್ದರು.

ಸಚಿವ ಸತೀಶ್ ಜಾರಕಿಹೊಳಿ, ಖಾದ್ರಿ ಅವರು ತಮ್ಮ ಅಧಿಕಾರಾವಧಿಯಲ್ಲಿ ದೊಡ್ಡ ಯಶಸ್ಸು ಕಾಣಲಿ ಎಂದು ಶುಭ ಹಾರೈಸಿದರು
ಇದಕ್ಕೂ ಮೊದಲು ಹಲಗೂರ ಗ್ರಾಮದ ಶ್ರೀ ಹಜರತ್ ಸೈಯದ್ ಶಾ ಖಾದ್ರಿ ದರ್ಗಾಕ್ಕೆ ಭೇಟಿ ನೀಡಿದ ಗಣ್ಯರು
ಪ್ರಾರ್ಥನೆ ಸಲ್ಲಿಸಿದರು.
—–