ಅನುದಿನ ಕವನ-೧೪೩೦, ಕವಿ: ಚಂದ್ರಶೇಖರ ಮಾಡಲಗೇರಿ, ಬೆಂಗಳೂರು, ಕವನದ ಶೀರ್ಷಿಕೆ: ಚಂದ್ರ

ಚಂದ್ರ
ಕೇವಲ ನೆನಪಷ್ಟೇ
ಸೂರ್ಯ ಎದೆಯ ಮೇಲೆ
ಎಳೆಬಿಸಿಲು ಹರಡುವಾಗ.

ಚಂದ್ರ
ಕೇವಲ ನೆಪವಷ್ಟೇ
ಕೊರಳ ಬಳಸಿ ಚುಕ್ಕಿ ತಾರೆಗಳು
ಮತ್ತಾಗಿ ಉದುರುವಾಗ.

ಚಂದ್ರ
ಕೇವಲ ಜಪವಷ್ಟೇ
ಬೆಳದಿಂಗಳು ಎದೆಗಿಳಿದಿಳಿದು
ಕರುಳ ಬಳ್ಳಿಯ ನೂಲು ನೇಯುವಾಗ.

ಚಂದ್ರ
ಕೇವಲ ಕಾಯವಷ್ಟೇ
ಬಾಗುತ ಬೀಗುತ ಏಗುತ ಸಾಗುತ
ಆಗಸದ ಚೂಪು ಮೂಗಿನ ನತ್ತಾಗುವಾಗ.

-ಚಂದ್ರಶೇಖರ ಮಾಡಲಗೇರಿ, ಬೆಂಗಳೂರು
—–