ಅನುದಿನ‌ಕವನ-೧೪೩೨, ಕವಯಿತ್ರಿ: ಅಪೂರ್ವ ಹಿರೇಮಠ, ಬೆಂಗಳೂರು

ಕನಸುಗಳು ಖಾಲಿಯೋ
ಮನಸ್ಸಿಗೆ ಖಾಯಿಲೆಯೋ,
ತುಸು ಗೊಂದಲವಿದೆ.

ರಾತ್ರಿಯೀಗ ಕತ್ತಲೆಯಷ್ಟೇ,
ಕಲ್ಪನೆಗೆ ಬರ ಬಂದಂತೆ,
ತುಸು ಗೊಂದಲವಿದೆ.

ನಿನ್ನೆಯ ಮರೆತಂತೆ
ನಾಳೆ ಮರೀಚಿಕೆಯಂತೆ
ತಕ್ಷಣಕೆ ಗೊಂದಲವಿದೆ.

ಬೆಳಕಿಂಡಿ ಕಣ್ರೆಪ್ಪೆ ತೆರೆಸಿ,
ನವ ತರಂಗಗಳ ಎದೆಗಿಳಿಸಿ
ಹೊಸದೊಂದು ಜೀವಕಳೆ ತುಂಬಿದೆ

-ಅಪೂರ್ವ ಹಿರೇಮಠ, ಬೆಂಗಳೂರು
—–