ಎಸ್ ಎಸ್ ಎ ಸರಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ರಕ್ತದಾನ ಶಿಬಿರ ಯಶಸ್ವಿ: 97 ವಿದ್ಯಾರ್ಥಿಗಳಿಂದ ರಕ್ತದಾನ

ಬಳ್ಳಾರಿ, ಡಿ.,5:  ನಗರದ ಶ್ರೀಮತಿ ಸರಳಾದೇವಿ ಸತೀಶ್ಚಂದ್ರ ಅಗರವಾಲ್ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ (ಸ್ವಾಯತ್ತತೆ) ರೆಡ್ ಕ್ರಾಸ್ ಘಟಕ ಮತ್ತು ಎಚ್.ಡಿ.ಎಫ್.ಸಿ ಬ್ಯಾಂಕ್ ಸಹಯೋಗದಲ್ಲಿ ಗುರುವಾರ ರಕ್ತದಾನ ಶಿಬಿರ ನಡೆಯಿತು.                                      ಕಾಲೇಜಿನ ವಿದ್ಯಾರ್ಥಿ-ವಿದ್ಯಾರ್ಥಿನಿಯರು ಉತ್ಸಾಹದಿಂದ ರಕ್ತದಾನ ಶಿಬಿರದಲ್ಲಿ ಪಾಲ್ಗೊಂಡಿದ್ದರು. ಶಿಬಿರದಲ್ಲಿ 97 ವಿದ್ಯಾರ್ಥಿಗಳು ರಕ್ತದಾನ ಮಾಡಿದರು ಎಂದು ರೆಡ್ ಕ್ರಾಸ್ ಘಟಕ ಮುಖ್ಯಸ್ಥರಾದ ಡಾ ಪಲ್ಲವಿ ಅವರು ತಿಳಿಸಿದರು. ಶಿಬಿರದಲ್ಲಿ ಪಾಲ್ಗೊಂಡಿದ್ದ  ಕಾಲೇಜಿನ ಪ್ರಾಂಶುಪಾಲರಾದ ಪ್ರೊ ಮೋನಿಕಾ ರಂಜನಾ ಅವರು ರಕ್ತದಾನ ಮಾಡಿದ ವಿದ್ಯಾರ್ಥಿಗಳಿಗೆ ಪ್ರಮಾಣ ಪತ್ರ ವಿತರಿಸಿದರು.               ಈ ಸಂದರ್ಭದಲ್ಲಿ ಕಾಲೇಜಿನ‌ ಪರೀಕ್ಷಾ ನಿಯಂತ್ರಕಿ ಡಾ. ಶೋಭ,  ರೆಡ್ ಕ್ರಾಸ್ ಘಟಕ ಮುಖ್ಯಸ್ಥರಾದ ಡಾ ಪಲ್ಲವಿ. ಪ್ರಾಧ್ಯಾಪಕರುಗಳಾದ  ಡಾ ಮಂಜುನಾಥ,  ಕಲ್ಯಾಣ ಬಸವ, ಬ್ಯಾಂಕ್ ಅಧಿಕಾರಿಗಳು ಉಪಸ್ಥಿತರಿದ್ದರು.