ಮಾನವ ಹಕ್ಕುಗಳ ದಿನಾಚರಣೆ: ಸಂವಿಧಾನ ಆರಾಧನೆಗಿಂತ ಅನುಸರಣೆ ಮುಖ್ಯವಾಗಬೇಕು – ಪ್ರಾದ್ಯಾಪಕ ಡಾ. ಹೊನ್ನೂರಲಿ

ಬಳ್ಳಾರಿ, ಡಿ.10: ಪ್ರಜಾಪ್ರಭುತ್ವ ಯಶಸ್ವಿಯಾಗಲು ಸಂವಿಧಾನ ಆರಾಧನೆಗಿಂತ ಅನುಸರಣೆ ಮುಖ್ಯವಾಗಬೇಕು ಎಂದು ರಾಜ್ಯಶಾಸ್ತ್ರ ವಿಭಾಗದ ಮುಖ್ಯಸ್ಥ ಡಾ. ಹೊನ್ನೂರಲಿ ಅವರು ಹೇಳಿದರು.                                             ನಗರದ ಎಸ್ ಎಸ್ ಎ ಸರಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ಮಂಗಳವಾರ ಸಿಪಿಡಿಆರ್ ಸಂಸ್ಥೆ ಹಾಗೂ ಕಾಲೇಜಿನ ರಾಜ್ಯಶಾಸ್ತ್ರ, ಪತ್ರಿಕೋದ್ಯಮ ಹಾಗೂ ಸಮಾಜಶಾಸ್ತ್ರ ವಿಭಾಗಗಳ ಸಹಯೋಗದಲ್ಲಿ ಜರುಗಿದಮಾನವ ಹಕ್ಕುಗಳ ದಿನಾಚರಣೆ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.            ಮಾನವ ಹಕ್ಕುಗಳು ನಿರಂತರವಾಗಿ ಉಲ್ಲಂಘನೆಯಾಗುತ್ತಿರುವುದು ದುಃಖದ ಸಂಗತಿ. ಅಸ್ಪೃಶ್ಯತೆ, ಮಹಿಳೆಯರ ಮೇಲಿನ ದೌರ್ಜನ್ಯ, ಮಕ್ಕಳ‌ ಶೋಷಣೆ ನಿರಂತರವಾಗಿವೆ ಎಂದು‌ ವಿಷಾಧಿಸಿದರು.

ಸಿಪಿಡಿಆರ್ ಎಸ್‌ ಮುಖ್ಯಸ್ಥ ಸೋಮಶೇಖರ ಗೌಡ ಅವರು ಮಾತನಾಡಿ, ಆರ್ಥಿಕ ಸ್ವಾತಂತ್ರ್ಯ ಬರದೆ ಸಾಮಾಜಿಕ ಸ್ವಾತಂತ್ರ್ಯ ಬರದು ಎಂದರು.
ಸರಕಾರಗಳ ಜನವಿರೋಧಿ ನೀತಿಗಳು ಹೀಗೆ ಮುಂದುವರೆದರೆ ಮಧ್ಯಮ‌ವರ್ಗ ಕೆಲವು ವರ್ಷಗಳಲ್ಲಿ ಇರುವುದೇ ಇಲ್ಲ ಎಂದು ಹೇಳಿದರು.
ಸಂಪತ್ತಿನ ತೆರಿಗೆಯನ್ನು ತೆಗೆದು ಹಾಕಲಾಗಿದೆ.
ಸಂವಿಧಾನದ ಆಶಯಗಳನ್ನು ಗಾಳಿಗೆ ತೂರಲಾಗಿದೆ. ಎಂದು ಟೀಕಿಸಿದರು.
ಯುವಕರ ಜವಾಬ್ದಾರಿ ಹೆಚ್ಚಿದೆ. ಅನ್ಯಾಯದ ವಿರುದ್ದ ದನಿ ಎತ್ತ ಬೇಕು. ಸಂವಿಧಾನವನ್ನು ವಿದ್ಯಾರ್ಥಿ ಯುವಜನರೇ ರಕ್ಷಿಸಬೇಕು ಎಂದು ತಿಳಿಸಿದರು.
ಆರೋಗ್ಯ, ಶಿಕ್ಷಣ ಮೂಲಭೂತ ಹಕ್ಕು. ಆದರೆ
ದುಡ್ಡಿದ್ದರೆ ಮಾತ್ರ ಶಿಕ್ಷಣ, ಆರೋಗ್ಯ ದೊರೆಯುತ್ತದೆ.
ಗೌರಯುತವಾಗಿ ಜೀವಿಸಲು ಉದ್ಯೋಗ ಅತ್ಯಗತ್ಯ.
ಗುತ್ತಿಗೆ, ಹೊರಗುತ್ತಿಗೆ ಜಾಸ್ತಿಯಾಗಿದೆ. ನಿರುದ್ಯೋಗ, ಜನಸಂಖ್ಯೆ ಹೆಚ್ಚಾಗುತ್ತಿದೆ ಸೋಮಶೇಖರ ಗೌಡ ದೂರಿದರು.
ಏಷ್ಯಾದ ದೊಡ್ಡ ಉದ್ಯಮಿಯಾಗಿರುವ ಭಾರತೀಯ ರೈಲ್ವೆ ಇಲಾಖೆಯನ್ನು ಖಾಸಗೀಕರಣಗೊಳಿಸಲಾಗುತ್ತಿದೆ ಎಂದು ತಿಳಿಸಿದರು.


ಶಿಕ್ಷಣ ಉಳಿಸಿ ಆಂದೋಲನದ ನಾಗರತ್ನ ಅವರು
ಪ್ರಾಸ್ತಾವಿಕವಾಗಿ ಮಾತನಾಡಿ ಎಲ್ ಕೆ ಜಿ ಇಂದ ಪಿಜಿವರೆಗೂ ಶಿಕ್ಷಣ ವ್ಯಾಪಾರಿಕರಣವಾಗಿದೆ, ಹಿಂದಿಯೇತರ ರಾಜ್ಯಗಳ‌ ಮೇಲೆ ಹಿಂದಿ ಏರಿಕೆ ಮಾನವ ಹಕ್ಕುಗಳ ಉಲ್ಲಂಘನೆಯಾಗಿದೆ ಎಂದರು.
ರಾಜ್ಯಶಾಸ್ತ್ರ ವಿಭಾಗದ ಉಪನ್ಯಾಸಕ ಡಾ. ಟಿ. ದುರುಗಪ್ಪ ಅವರು ಸ್ವಾಗತಿಸಿ‌ ನಿರೂಪಿಸಿದರು.
ಸಂಸ್ಥೆಯ ಸದಸ್ಯ ಗುರಳ್ಳಿ ರಾಜ ಕ್ರಾಂತಿಗೀತೆ ಹಾಡಿದರು. ಗುರುರಾಜ ವಂದಿಸಿದರು.
ಜೆಪಿಎಸ್ ವಿಭಾಗಗಳ ಉಪನ್ಯಾಸಕರು, ವಿದ್ಯಾರ್ಥಿಗಳು ಭಾಗವಹಿಸಿದ್ದರು.
—–