ಬೆಸೆಯುತ್ತವೆ
ನೋಯುತ್ತವೆ
ಪ್ರತಿ ಜಾಡಿನ ಅರಿವಿದ್ದರೂ….
ಒಲವ ಹಂಬಲಿಸುವ
ಮುಖಗಳ ಮುಖನೋಡಲು ಸಾದ್ಯವಿಲ್ಲದೆ
ಕಲ್ಲುಗೂಟದಂತೆ ಇದ್ದೇ ಬಿಡುತ್ತವೆ.!!!
ಚಲನೆ ಅಗಾಧ ಶಕ್ತಿ
ಹೊರಟಿದ್ದು ಇರುವೆ ಸಾಲಿನಂತೆ
ಏಟು ಬಿದ್ದಿರುವುದು ಶತ್ರುಗಳಿಂದ ಮಾತ್ರವಲ್ಲ..
ಬಾಳಿನಲಿ
ಪ್ರೀತಿಯನ್ನು ಪ್ರೀತಿಸುತ್ತಾ ಹೋಗುತ್ತೇವೆ
‘ಹುಟ್ಟು’ ‘ಸಾವು ‘ ಎರಡು ದಡವಲ್ಲವೆ?
ನಡುವೆ
ಸುಳ್ಳು ಮಾಯಾ ಮೋಹ ?
ಮಣ್ಣಾಗುವುದ ಕಾಣುವೆವು
ನಿಜ ಸಹಜ ಬೆಳಕಿನಲಿ…!!!
ಜೀವದ ಜೀವ
ಹಾದಿ ಬದಿಯ ಸೂರ್ಯಕಾಂತಿ ಹೊಲಕೆ ಮರುಳಾಗಿ
ಕೆನ್ನೆ ಮೇಲೆ ಬೆರಳಿಟ್ಟು ನಿಂತ ಚಿತ್ರ;
ನನ್ನ ಹೃದಯದ
ಟಂಕಸಾಲೆಯಲಿ ಟಿಂಕಿಸುತ್ತಿರುವ
ಹೊಸ ಚಿನ್ನದ ನಾಣ್ಯದಂತೆ
ಹೊರಬರುತ್ತಿದೆ.
ದೇಶದ ಗಡಿಗಳೆಂದರೆ
ದೇಹದ ಗಡಿಗಳು
ಪಾಕಿಸ್ತಾನದ ಕವಿ ಬರೆದಿದ್ದನಂತೆ
‘ಎರಡು ಸಾವು ಎದುರಾಗಿ
ಸಾವ ಗೆಲ್ಲಲು ಸೆಣಸುವವು
ಗೆದ್ದ ಸಾವು ಹೇಳಿತು
ಜೀವನ ಅಧ್ಬುತ’!!!
-ನಾಗತಿಹಳ್ಳಿರಮೇಶ, ಬೆಂಗಳೂರು