ಅನುದಿನ ಕವನ-೧೪೪೪, ಕವಿ: ರಘೋತ್ತಮ ಹೊಬ, ಮೈಸೂರು, ಕವನದ ಶೀರ್ಷಿಕೆ: ಬಾಡಿನ ರುಚಿ

ಬಾಡಿನ ರುಚಿ

ಬೀದಿಯ ಉದ್ದಕು ಬಾಡಿನ ಘಮಲು
ಮನಸ್ಸು ತೇಲಿತು ಆಹಾ…! ಅಮಲು

ನಾಲಿಗೆ ತುದಿಗೆ ಬಾಡಿನ ತುಂಡು
ದೇಹ ತೂರಾಡಿತ್ತು ಹಾಕದೆ ಗುಂಡು

ನಟಕ್ಕನೆ ಕಡಿದಿತ್ತು ಹಲ್ಲು ನಲ್ಲಿ ಮೂಳೆ
ಮನಸ್ಸು ಹೇಳಿತು ಆಹಾ… ಗಟ್ಟಿಯಾಯ್ತು ಮೂಳೆ

ಸೊರೆಯುತ ನೆಕ್ಕುತ ಬಾಡಿನ
ಎಸರು
ಬದುಕಿನ ಸವಿ ಇದು ಕೆನೆ ಹಾಲು ಮೊಸರು

ನೂರು ತರಕಾರಿ ಚೂರು
ಬಾಡಿನ ಮುಂದೆ ದೂರ ಮಾರು
ನೂರು ಸಿಹಿಯ ಖಾದ್ಯ
ಬಾರಿಸಿತು ಬಾಡಿನ ಮುಂದೆ
ರೋಧನದ ವಾದ್ಯ

-ರಘೋತ್ತಮ ಹೊಬ, ಮೈಸೂರು
——