ಅನುದಿನ ಕವನ-೧೪೪೮, ಕವಿ: ಮಾಣಿಕ ನೇಳಗಿ ತಾಳಮಡಗಿ, ಬೀದರ್ ಜಿ., ಕವನದ ಶೀರ್ಷಿಕೆ:ಸಖಿ

ಸಖಿ

ಬಂದುಬಿಡು ಸಖಿ ಬತ್ತಿದೊಲವ ಚಿಮ್ಮಿಸಲು
ಬೆಟ್ಟದಷ್ಷು ನೋವನು ಬದಿಗೆ ಸರಿಸಲು
ಮುದುಡಿದಾ ಮನವು ಮತ್ತೆ ಅರಳಿಸಲು
ಸೋತ ಕಂಗಳಲಿ ಕಾಂತಿಯನು ತುಂಬಲು

ಬಂದುಬಿಡು ಸಖಿ ಮನಕೆ ಚೈತನ್ಯ ಬರಿಸಲು
ಕಾಯುತಲಿರುವ ಸಂಸಾರಕೆ ಚಾಲನೆ ನೀಡಲು
ಕೈಯ್ಯಾರೆ ತಂದಿರುವೆ ತಾವರೆ ಮುಡಿಯಲು
ಅರಳಿ ಮೈಚಾಚಿವೆ ನಿನಗಾಗಿ ಬಣ್ಣಗಳು ಏಳು

ಏಕೆ ಹೋದೆ ಹೇಳು ಮೌನದಲಿ ನೀನು ?
ನನ್ನಿಂದಾದ ಪ್ರಮಾದವಾದರು ಏನು ?
ಬರುವವರೆಗೆ ಕುಡಿಯಲಾರೆ ಹನಿ ನೀರನು
ಈ ದೇಹದ ಪರಿವೆಯೇ ಮರೆತಿರುವೆ ನಾನು

ಹೇಳುತಿದೆ ಜೀವ ನಿನ್ನ ಮೊಗ ಕಾಣಬೇಕೆಂದು
ಅರೆಕ್ಷಣದಲಿ ಬಂದುಬಿಡು ಒಲವಿನ ಬಿಂದು
ಹಿಡಿದಿದೆ ಪಟ್ಟು ಪ್ರಾಣ ಎದೆಗೊರಗಬೇಕೆಂದು
ಕೊನೆಯಾಸೆ ಈಡೇರಿಸು ರಮಣಿ ನೀ ಬಂದು.

-ಮಾಣಿಕ ನೇಳಗಿ ತಾಳಮಡಗಿ, ಬೀದರ್ ಜಿ.