ಬಳ್ಳಾರಿ: ಜಿಲ್ಲೆಯ ಸಂಡೂರು ತಾಲೂಕಿನ ವಿಠಲಾಪುರ ಸರಕಾರಿ ಐಟಿಐ ಕಾಲೇಜಿನ ವಿದ್ಯಾರ್ಥಿಗಳಿಗೆ ಮಧ್ಯಾಹ್ನದ ಊಟದ ಸೌಲಭ್ಯ ಸಿಗುತ್ತಿರುವುದು ರಾಜ್ಯದಲ್ಲೇ ಪ್ರಥಮ ಎಂದು ಐ.ಎಂ.ಸಿಯ ಸದಸ್ಯರು, ತೋರಣಗಲ್ಲು ಐಟಿಐ ಕಾಲೇಜಿನ ಪ್ರಾಚಾರ್ಯರೂ ಆದ ಎಂ.ಸಿ. ಸುರೇಶ್ ಅವರು ಹೇಳಿದರು.
ಅವರು ಜಿಲ್ಲೆಯ ವಿಠಲಾಪುರ ಗ್ರಾಮದ ಸರಕಾರಿ ಐಟಿಐ ಕಾಲೇಜಿನ ವಿದ್ಯಾರ್ಥಿಗಳಿಗೆ ಏರ್ ವಾಟರ್ ಇಂಡಿಯಾ ಪ್ರೈವೇಟ್ ಲಿ.ಕಂಪನಿಯ ವತಿಯಿಂದ ಬಳ್ಳಾರಿಯ ಸ್ಥಿರಾ ಸಂಸ್ಥೆ ಕಾಲೇಜಿನ ಆಡಳಿತ ಸಮಿತಿಯ ಸಹಯೋಗದಲ್ಲಿ ಆರಂಭವಾದ ಮಧ್ಯಾಹ್ನದ ಬಿಸಿಯೂಟ ಯೋಜನೆಯ ಉದ್ಘಾಟನಾ ಸಮಾರಂಭದಲ್ಲಿ ಮಾತನಾಡಿದರು.
ಗ್ರಾಮದ ಐಟಿಐ ಕಾಲೇಜಿಗೆ ತರಬೇತಿಗೆ ಬರುವ ವಿದ್ಯಾರ್ಥಿಗಳು ಬಸ್ಸುಗಳ ಕೊರತೆಯಿಂದಾಗಿ ಕಾಲೇಜು ಬಿಡುವವರ ಸಂಖ್ಯೆಯೂ ಹೆಚ್ಚಾಗಿತ್ತು. ಏರ್ ವಾಟರ್ ಇಂಡಿಯಾ ಪ್ರೈ.ಲಿ. ಕಂಪನಿಯವರು ಇಲ್ಲಿನ ವಿದ್ಯಾರ್ಥಿಗಳಿಗೆ ಮಧ್ಯಾಹ್ನದ ಊಟ ನೀಡಲು ಆರಂಭಿಸಿದ್ದಾರೆ. 2016 ರಿಂದ ಮಧ್ಯಾಹ್ಮದ ಬಿಸಿಯೂಟ ನೀಡಲಾಗುತ್ತಿತ್ತು ಕರೋನಾ ಸಂದರ್ಭದಲ್ಲಿ ಈ ಯೋಜನೆಗೆ ಅಡಚಣೆಯುಂಟಾಗಿತ್ತು. ಕಾಲೇಜಿನಿಂದ ಹೊರಗುಳಿಯುವವರ ಸಂಖ್ಯೆ ಹೆಚ್ಚಾಯಿತು. ಪ್ರವೇಶಾತಿಯೂ ಕಡಿಮೆಯಾಯಿತು. ಈಗ ಮತ್ತೆ ಈಯೋಜನೆಗೆ ಸ್ಥಿರಾ ಸಂಸ್ಥೆಯ ಸಹಯೋಗದೊಂದಿಗೆ ಒಂದು ಶೈಕ್ಷಣಿಕ ವರ್ಷದಲ್ಲಿ 220 ವಿದ್ಯಾರ್ಥಿಗಳು 234 ದಿನ ಇದರ ಸೌಲಭ್ಯ ಪಡೆಯಲಿದ್ದಾರೆ ಎಂದರು. ಇದರಿಂದ ವಿದ್ಯಾರ್ಥಿಗಳ ಹಾಜರಾತಿ ಪ್ರಮಾಣ ಹೆಚ್ಚಾಗಲಿದೆ. ಸಂಡೂರು ತಾಲೂಕಿನಲ್ಲಿರುವ ವಿವಿಧ ಕೈಗಾರಿಕೆಗಳಿಗೆ ಅಗತ್ಯ ಕೌಶಲ್ಯಯುಕ್ತ ಮಾನವ ಸಂಪನ್ಮೂಲಗಳ ಅಗತ್ಯವಿದೆ. ಬಡಕುಟುಂಬದಿಂದ ಬರುವ ವಿದ್ಯಾರ್ಥಿಗಳಿಗೆ ಈ ಸೌಲಭ್ಯ ಅನುಕೂಲವಾಗಲಿದೆ ಎಂದು ವಿವರಿಸಿದರು.
ಈ ಯೋಜನೆ ಯಶಸ್ಸಿಗೆ ಏರ್ ವಾಟರ್ ಇಂಡಿಯಾ ಲಿ.ನ ರೆಹಮಾನ್ ಅವರು ಕಾರಣರಾಗಿದ್ದಾರೆ ಎಂದು ಶ್ಲಾಘಿಸಿದರು. ಮುಖ್ಯ ಅತಿಥಿ ವಾಟರ್ ಪ್ರೈವೇಟ್ ಲಿ.ನ ಜನರಲ್ ಮ್ಯಾನೇಜರ್ ರೆಹಮಾನ್ ಮಾತನಾಡಿ ಏರ್ ವಾಟರ್ ಇಂಡಿಯಾ ಪ್ರವೇಟ್ ಲಿಮಿಟೆಡ್” ಕಂಪನಿ ಆಕ್ಸಿಜನ್ ಉತ್ಪಾದಿಸುವ ಕಂಪನಿಯಾಗಿದ್ದು, ಅದರ ಶಾಖೆಗಳು ಕೊಲಕತ್ತಾ, ಚೆನ್ನೈ ಬೆಂಗಳೂರು, ಬಳ್ಳಾರಿಯಲ್ಲಿವೆ. ಕಂಪನಿ ಮುಖ್ಯವಾಗಿ ಗುಣಮಟ್ಟದ ವಿದ್ಯಾಭ್ಯಾಸಕ್ಕಾಗಿ, ಸುರಕ್ಷಿತ ಕುಡಿಯು ನೀರು, ಶುಚಿತ್ವ, ನೈರ್ಮಲ್ಯ ಅಭಿವೃದ್ಧಿಗೊಳಿಸುವ ಕಾರ್ಯಕ್ರಮಗಳಿಗಾಗಿ ಸಿ.ಎಸ್.ಆರ್. ಅಡಿಯಲ್ಲಿ ಸಹಕಾರ ನೀಡುವುದಾಗಿರುತ್ತದೆ. ಸದರಿ ಸೌಲಭ್ಯವು ಗುಣಮಟ್ಟದ ವಿದ್ಯಾಭ್ಯಾಸಕ್ಕಾಗಿ ಅನುಮೋದಿಸಲಾಗಿದೆ ಎಂದು ಮಾಹಿತಿನೀಡಿದರು. ಮತ್ತೋರ್ವ ಅತಿಥಿ ಬಳ್ಳಾರಿ ಐಟಿಐ ಕಾಲೇಜಿನ ಪ್ರಾಚಾರ್ಯ ಪಂಡಿತಾರಾಧ್ಯ ಜೀವನದಲ್ಲಿ ಚರಾ, ಸ್ಥಿರಾ ಆಸ್ತಿಗಳಿಗಾಗಿ ಜನರು ಅನೇಕ ಬಗೆಯ ಶ್ರಮಗಳಲ್ಲಿ ತೊಡಗುತ್ತಿರುವುದು ಎಲ್ಲರಿಗೂ ತಿಳಿದಿರುವ ವಿಷಯವಾಗಿದೆ. ಉತ್ತಮ ಗುಣಮಟ್ಟದ ಜೀವಂತ, ಕರಗದಿರುವ, ವೃದ್ಧಿಗೊಳ್ಳುವ ಜೀವಂತ ಆಸ್ತಿಗಳಾಗಿ ರೂಪಗೊಳ್ಳುವ ವಿಧ್ಯಾರ್ಥಿಗಳು ದೇಶಕ್ಕೆ ಕರಗದ ಆಸ್ತಿಗಳು, ಅಂತಹ ಗುಣಮಟ್ಟ ಆಸ್ತಿಗಳನ್ನು ತಯಾರಿಸಲು ಪ್ರೋತಾಹಕರ ಅವಶ್ಯಕತೆಯನ್ನು ಪೂರೈಸುತ್ತಿರುವ ಕಂಪನಿಯ ಸೇವೆ ಶ್ಲಾಘನೀಯ ಎಂದು ಹೇಳಿದರು.
ಈ ಸಂದರ್ಭದಲ್ಲಿ ಕಂಪನಿಯ ಪ್ಲಾಂಟ್ ಮ್ಯಾನೇಜರ್ ರಾಘವೇಂದ್ರ ಎಂ.ಎಸ್., ಉತ್ಪಾದನಾ ವಿಭಾಗದ ಅಸೋಸಿಯೇಟ್ ಮ್ಯಾನೇಜರ್ ಡಿ.ರವಿತೇಜ, ಸೀನಿಯರ್ ಇಂಜಿನಿಯರ್ ಶಂಕರನಾರಾಯಣ ಸುರಕ್ಷತೆ ವಿಭಗಾದ ಅಸೋಸಿಯೇಟ್ ಮ್ಯಾನೇಜರ್ ಕೈಲಾಶ್ ಎಸ್. ಸಿರಗುಪ್ಪ ಐಟಿಐ ಕಾಲೇಜಿನ ಪ್ರಾಚಾರ್ಯ ಶೇಷಣ್ಣ, ವಿಠಲಾಪುರ ಐಟಿ.ಐ.ಕಾಲೇಜಿನ ಪ್ರಾಚಾರ್ಯ ಖುದರತ್ ಅಲಿ ಹೆಚ್ ಲೇನ್, ಬಳ್ಳಾರಿಸ್ಥಿರಾ ಸಂಸ್ಥೆಯ ರೇಣುಕಾ ಬಳ್ಳಾರಿ ಉಪಸ್ಥಿತರಿದ್ದರು.
—–