ಅನುದಿನ‌ ಕವನ-೧೪೪೯, ಕವಿ:ಸಿದ್ದು ಜನ್ನೂರು, ಚಾಮರಾಜ‌ನಗರ, ಕವನದ ಶೀರ್ಷಿಕೆ: ಅಂಬೇಡ್ಕರ್- ಅಂಬೇಡ್ಕರ್- ಅಂಬೇಡ್ಕರ್- ಅಂಬೇಡ್ಕರ್

ಜಗತ್ತೆ ನಿಬ್ಬೆರಗಾಗಿ
ನನ್ನ ದೇಶದ ಜ್ಞಾನ ಸೂರ್ಯನಿಗೆ
ಶರಣಾಗಿ ಹೋಗಿತ್ತು…

ಅಂಬೇಡ್ಕರ್ ಎನ್ನುವ ಹೆಸರೊಂದು
ನನ್ನ ದೇಶದತ್ತ
ವಿದೇಶಗಳು ತಿರುಗಿ ನೋಡುವಂತೆ ಮಾಡಿತ್ತು…

ಹಿಡಿ ಭೂಗೋಳದ ದೇಶವೆಲ್ಲ
ಭಾರತದ ಅಂಬೇಡ್ಕರ್ ಹೆಸರನ್ನು ಜಪಿಸಿದಷ್ಟು
ಇನ್ನಾರ ಹೆಸರನ್ನು ಜಪಿಸಿಲ್ಲವೆಂಬುದು
ಇತಿಹಾಸದಲ್ಲಿ ಎಂದೋ ದಾಖಲಾಗಿ ಹೋಗಿದೆ…

ಅಂಬೇಡ್ಕರ್ ಜನುಮದಿನವನ್ನು
ಎಲ್ಲ ದೇಶಗಳು ಆಚರಿಸುತ್ತವೆ
ಪ್ರಪಂಚವೇ ಅಂಬೇಡ್ಕರ್ ಎಂದರೆ
ತಲೆ ಬಾಗುತ್ತವೆ…

ಇವರ ಪ್ರತಿಮೆಗಳು
ದೇಶದಲ್ಲಷ್ಟೆ ಅಲ್ಲ
ಎಲ್ಲ ದೇಶಗಳಲ್ಲೂ
ಜ್ಞಾನದ ಪ್ರತಿಮೆಗಳಾಗಿ ನಿಂತಿವೆ…

ಅಂಬೇಡ್ಕರ್ ಸಹಿಗೆ
ಮನಸೋತವರಿಲ್ಲ
ಅಂಬೇಡ್ಕರ್ ಎನ್ನುವ ಹೆಸರೊಂದು
ಎಂದಿಗೂ ಜಗಜ್ಜಾಹೀರು…


-ಸಿದ್ದು ಜನ್ನೂರ್, ಚಾಮರಾಜನಗರ