ಅನುದಿನ ಕವನ-೧೪೫೭, ಕವಯಿತ್ರಿ: ರೂಪ ಗುರುರಾಜ್, ಬೆಂಗಳೂರು, ಕವನದ ಶೀರ್ಷಿಕೆ:ಕನಸುಗಳಿರಬೇಕು

ಕನಸುಗಳಿರಬೇಕು

ಎಲ್ಲವನ್ನೂ ಅರಿಯಲಾಗದು ಬದುಕಲ್ಲಿ
ಕೆಲವಕ್ಕೆ ಅರ್ಥವೇ ಇರುವುದಿಲ್ಲ ಇಲ್ಲಿ ..
ಅನಿಸಿದ್ದನ್ನು ಹಂಚಿಕೊಳ್ಳಲು ಹಿಂಜರಿಯದೆ
ಚಿಕ್ಕ ಚಿಕ್ಕ ಖುಷಿಗಳಿಗೆ ಚೌಕಾಸಿ ಮಾಡದೆ …

ಸಂತಸದ ಕ್ಷಣಗಳನ್ನು ಮನಸಾರೆ ಅನುಭವಿಸಿ
ದುಃಖದ ಅನುಭವಕ್ಕೂ ಸೋಲದೆ ಜೀವಿಸಿ ..
ಮತ್ತೆ ಎದ್ದು ನಿಲ್ಲಬೇಕು ಹೊಸ ನಾಳೆಗಳಿಗಾಗಿ
ಬದುಕೇ ಆಗ ನೋಡಬೇಕು ನಮ್ಮ ನಿಬ್ಬೆರಗಾಗಿ..

ಜಗದ ಜಂಜಾಟಗಳಿಗೆಲ್ಲ ಹೆಗಲು ಕೊಡದೆ
ನಿನ್ನೆಗಳ ನೆನಪುಗಳಿಗೆ, ಖಿನ್ನತೆಗೆ ಜಾರದೆ
ಒಂದೊಂದೇ ದಿನವ ನಮ್ಮದಾಗಿಸಿಕೊಳ್ಳುತ್ತಾ
ಕಲಿಯಬೇಕು ತಪ್ಪುಗಳನ್ನೂ ಒಪ್ಪವಾಗಿಸಿಕೊಳ್ಳುತ್ತಾ

ಒಂಟಿತನದ ಭಾವ ಸುಮ್ಮನೆ ಕಾಡದಂತೆ
ಇದ್ದುಬಿಡಲಿ ಕೆಲಸ್ನೇಹಗಳು ಕೈಗೆಟುಕುವಂತೆ
ಸಾಧಿಸಲು ಇನ್ನೂ ಬಹಳಷ್ಟು ಇದೆ ಬದುಕಿನಲ್ಲಿ
ಕನಸು ಕಾಣುವುದನ್ನು ಮಾತ್ರ ನಿಲ್ಲಿಸಬಾರದಲ್ಲಿ..

‌- ರೂಪ ಗುರುರಾಜ್, ಬೆಂಗಳೂರು
—–