ಬಳ್ಳಾರಿ ತಾಲೂಕು ಸರಕಾರಿ ಪ್ರಾಥಮಿಕ ಶಾಲಾ ಶಿಕ್ಷಕರ ಪತ್ತಿನ ಸಹಕಾರ ಸಂಘದ ನಿರ್ದೇಶಕರ ಆಯ್ಕೆಗೆ ನಡೆದ ಚುನಾವಣೆ ಬಹುತೇಕ‌ ಶಾಂತಿಯುತ

ಬಳ್ಳಾರಿ, ಡಿ.28: ಬಳ್ಳಾರಿ ತಾಲೂಕು ಸರಕಾರಿ ಪ್ರಾಥಮಿಕ ಶಾಲಾ ಶಿಕ್ಷಕರ ಪತ್ತಿನ ಸಹಕಾರ ಸಂಘದ 14 ನಿರ್ದೇಶಕರ ಆಯ್ಕೆಗೆ ಶನಿವಾರ‌ ಚುನಾವಣೆ ನಗರದ ಮುನಿಸಿಪಲ್ ಸರಕಾರಿ ಪ್ರೌಢಶಾಲೆಯ ಮೂರು ಕೊಠಡಿಗಳಲ್ಲಿ ನಡೆಯಿತು.
ಬಳ್ಳಾರಿ ಜಿಲ್ಲಾ ಸರಕಾರಿ ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ಅಧ್ಯಕ್ಷ ಸಿ.‌ನಿಂಗಪ್ಪ ಅವರ ನೇತೃತ್ವದ ಶಿಕ್ಷಕರ ಪತ್ತಿನ ಹಿತರಕ್ಷಣಾ ತಂಡದ ಅಭ್ಯರ್ಥಿಗಳು ಮತ್ತು
ತಾಲೂಕು ಸರಕಾರಿ ಪ್ರಾಥಮಿಕ ಶಾಲಾ ಶಿಕ್ಷಕರ ಪತ್ತಿನ ಸಹಕಾರ ಸಂಘದ ಅಧ್ಯಕ್ಷ ಬಿ. ಪೊಂಪನ ಗೌಡ ಅವರ ನೇತೃತ್ವದ ಸಮಾನ ಮನಸ್ಕರ ತಂಡದ‌ ಅಭ್ಯರ್ಥಿಗಳ‌ ನಡುವೆ ಮತಹೋರಾಟ ನಡೆಯಿತು.


ಬಳ್ಳಾರಿ ಪೂರ್ವ ಮತ್ತು ಪಶ್ಚಿಮ ವಲಯಗಳ‌ ಪ್ರಾಥಮಿಕ ಶಾಲೆಯ ಪತ್ತಿನ ಸಹಕಾರ ಸಂಘದ ಸದಸ್ಯ ಶಿಕ್ಷಕರು ಸರದಿ‌ಸಾಲಿನಲ್ಲಿ ನಿಂತು ತಮ್ಮ ಹಕ್ಕನ್ನು ಚಲಾಯಿಸಿದರು.
ಮಧ್ಯಾಹ್ನ 3 ಗಂಟೆ ವೇಳೆಗೆ ಒಟ್ಟು 956 ಮತಗಳ ಪೈಕಿ 815 ಮತಗಳು ಚಲಾವಣೆಯಾಗಿದ್ದು 85.25% ಮಾತದಾನವಾಗಿದ್ದು ಮತ ಚಲಾಯಿಸಲು ಸಂಜೆ 4 ಗಂಟೆಯವರೆಗೂ ಅವಕಾಶವಿತ್ತು.
ಎರಡು ತಂಡಗಳ ಒಟ್ಟು 26 ಹಾಗೂ ಪಕ್ಷೇತರ ಇಬ್ಬರು‌ ಸೇರಿದಂತೆ ಒಟ್ಟು 28 ಅಭ್ಯರ್ಥಿಗಳು ಕಣದಲ್ಲಿದ್ದಾರೆ.
ಚುನಾವಣಾಧಿಕಾರಿಯಾಗಿ ಸಹಕಾರ ಇಲಾಖೆಯ ಅಧಿಕಾರಿ‌ ರಮೇಶ್ ಅವರು ಕಾರ್ಯನಿರ್ವಹಿಸಿದರು.
ಎರಡು ತಂಡಗಳ ಅಭ್ಯರ್ಥಿಗಳು ಹಾಗೂ ಬೆಂಬಲಿಗರ ನಡುವೆ ಸಣ್ಣಪುಟ್ಟ ಮಾತಿನ‌ ಚಕಮಕಿ ಹೊರತು ಚುನಾವಣೆ ಶಾಂತವಾಗಿ ಜರುಗಿತು ಎಂದು ಮೂಲಗಳು ಕರ್ನಾಟಕ ಕಹಳೆ ಡಾಟ್ ಕಾಮ್ ಪ್ರತಿನಿಧಿಗೆ ತಿಳಿಸಿದರು.            ವಿಶೇಷ ಚೇತನ ಶಿಕ್ಷಕರೊಬ್ಬರು  ತಮ್ಮ‌ಮತ ಚಲಾಯಿಸಲು ಮತಕೇಂದ್ರಕ್ಕೆ ಆಗಮಿಸಿದ್ದು ಗಮನ ಸೆಳೆಯಿತು.

ಮತದಾನದ ವೇಳೆ ಯಾವುದೇ ಅಹಿತಕರ ಘಟನೆಗಳು ಜರುಗದಂತೆ ಪೊಲೀಸರು ಸೂಕ್ತ ಬಂದೋಬಸ್ತ್ ಏರ್ಪಡಿಸಿದ್ದರು.

——-