ಬಳ್ಳಾರಿ ಸರಕಾರಿ ಶಿಕ್ಷಕರ ಪತ್ತಿನ ಸಹಕಾರ ಸಂಘದ ಚುನಾವಣೆ: ಸಮಾನ ಮನಸ್ಕರ ತಂಡಕ್ಕೆ ಭರ್ಜರಿ ಜಯ

ಬಳ್ಳಾರಿ, ಡಿ.29: ಬಳ್ಳಾರಿ ತಾಲೂಕು ಸರಕಾರಿ ಪ್ರಾಥಮಿಕ ಶಾಲಾ ಶಿಕ್ಷಕರ ಪತ್ತಿನ ಸಹಕಾರ ಸಂಘದ 14 ನಿರ್ದೇಶಕರ ಆಯ್ಕೆಗೆ ಶನಿವಾರ‌ ನಡೆದ ಚುನಾವಣೆಯಲ್ಲಿ ಸಂಘದ ಹಾಲಿ ಅಧ್ಯಕ್ಷ ಪೊಂಪನ ಗೌಡ.ಬಿ ಅವರ ನೇತೃತ್ವದ ಸಮಾನ ಮನಸ್ಕರ ತಂಡದ ಅಭ್ಯರ್ಥಿಗಳು ಭರ್ಜರಿ ಜಯ ದಾಖಲಿಸಿದ್ದಾರೆ.
ಬಳ್ಳಾರಿ ಜಿಲ್ಲಾ ಸರಕಾರಿ ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ಅಧ್ಯಕ್ಷ ಸಿ.‌ನಿಂಗಪ್ಪ ಅವರ ನೇತೃತ್ವದ ಶಿಕ್ಷಕರ ಪತ್ತಿನ ಹಿತರಕ್ಷಣಾ ತಂಡ ಮತ್ತು  ಬಿ. ಪೊಂಪನ ಗೌಡ ಅವರ ನೇತೃತ್ವದ ಸಮಾನ ಮನಸ್ಕರ ತಂಡದ‌ ಅಭ್ಯರ್ಥಿಗಳ‌ ನಡುವೆ ಮತ ಪಡೆಯುವ ಸ್ಪರ್ಧೆಯಲ್ಲಿ ಗೌಡರ ತಂಡ ವಿಜಯದ ನಗೆ ಬೀರಿದೆ.


ವಿಜೇತ ಸಾಮಾನ್ಯ ಅಭ್ಯರ್ಥಿಗಳು:  ಪೊಂಪನ ಗೌಡ.ಬಿ (595),  ಬಸವ ಪ್ರಕಾಶ್.ವೈ  (547), ಹನುಮಂತಪ್ಪ.ಕೆ  (537),  ರಾಘವ ರೆಡ್ಡಿ (505), ಮಹಾಂತೇಶ್ ಬಿ ಎನ್( 494), ರಾಜಶೇಖರಯ್ಯ ಕೆ.ಎಂ (479), ಸಿರಾಜ್ ಪಾಷಾ (474), ಸುಭಾನ್ ಎಲ್. ಕೆ (463), ಮಂಜುನಾಥ್ .ಎ (445)


ಪರಿಶಿಷ್ಟ ಜಾತಿ ಕ್ಷೇತ್ರದಿಂದ ಮಂಜುನಾಥ್ ಕೊಳಗಲ್ಲು(471) ಅವರು ಗೆಲುವು ಸಾಧಿಸಿದ್ದಾರೆ.
ಮಹಿಳಾ ಕ್ಷೇತ್ರದಿಂದ ಎಂ. ಜಯಶ್ರೀ(522) ಮತ್ತು ಚಂದ್ರಕಲಾ ಎಂ (507) ವಿಜಯಶೀಲರಾಗಿದ್ದಾರೆ.
ಹಿಂದುಳಿದ ವರ್ಗ(ಪ್ರವರ್ಗ ಎ) ಕ್ಷೇತ್ರದಿಂದ ಅಬ್ದುಲ್ ಮುಜೀಬ್‌ ಅವರು(514) ತಮ್ಮ‌ಸಮೀಪದ ಪ್ರತಿಸ್ಪರ್ಧಿ ನುಸ್ರೀತ್ ಉನ್ನೀಸ್ (343) ಅವರನ್ನು 171 ಮತಗಳಿಂದ ಪರಾಭವಗೊಳಿಸಿದ್ದಾರೆ.

ವಿಶೇಷವೆಂದರೆ ಪರಿಶಿಷ್ಟ ಪಂಗಡ ಕ್ಷೇತ್ರಕ್ಕೆ ಪಕ್ಷೇತರರಾಗಿ ಸ್ಪರ್ಧಿಸಿದ್ದ ರಾಘವೇಂದ್ರ ಬಿ ಅವರು ತಮ್ಮ ಸಮೀಪದ ಪ್ರತಿಸ್ಪರ್ಧಿ ಸಮಾನ ಮನಸ್ಕ ತಂಡದ ಕೆಂಚಪ್ಪ. ಕೆ ಅವರನ್ನು ಕೇವಲ 17 ಮತಗಳಿಂದ ಪರಾಭವಗೊಳಿಸಿದ್ದಾರೆ.

—–