ಬೇಡದ ನೆನಪುಗಳು
ಬೇಡದ ನೆನಪುಗಳು
ಕಗ್ಗತ್ತಲಲ್ಲಿ ಕರಗಿ ಹೋಗಲಿ
ಮನವ ಕೊರಗಿಸುವ ಶಕ್ತಿ
ಕಳೆದುಕೊಳ್ಳಲಿ.
ಬೇಡದ ನೆನಪುಗಳು
ಬಾರದ ನೆಲೆಗೆ ಬಾಯಾರಿ
ಮನದ ಗುಡಿಯಿಂದ ಹಾರಿ
ಕಣ್ಮರೆಯಾಗಲಿ.
ಬೇಡದ ನೆನಪುಗಳು
ಬೇಡದ ಘಟನೆಗಳ ನೆನಪಿತ್ತವರ
ಹೊತ್ತುಕೊಂಡು ಬೇಡದವರೊಂದಿಗೆ
ಕಾಲವಾಗಲಿ.
ಬೇಡದ ನೆನಪುಗಳು
ಅಪ್ಪಿ-ತಪ್ಪಿಯೂ ಬಳಿ ಸುಳಿಯದಂತೆ
ಬಾಳ ಬೆಳಕು ಬೆಳಗುತ್ತಾ
ಮಂಜಾಗಿಲಿ.
– ಮನಂ, ಬೆಂಗಳೂರು
—–