ಬೆಂಗಳೂರು, ಡಿ.4: ಕರ್ನಾಟಕದ ಚಲವಾದಿ ಗಂಟೆ ಬಟ್ಟಲುಗಳ ಅಧ್ಯಯನ ಕೃತಿ ಲೇಖಕ ಮಾಳವ ಮುನಿರಾಜು ಮತ್ತು ಬಳಗ ಪ್ರತಿ ವರ್ಷದಂತೆ ಈ ಬಾರಿಯೂ ‘ನಾವೆಲ್ಲಾ ಭಾರತೀಯರು’ ಹೊಸ ವರ್ಷದ ಕ್ಯಾಲೆಂಡರ್ ನ್ನು ಪ್ರಕಟಿಸಿದ್ದಾರೆ. ರಾಜ್ಯ ಅಗ್ನಿಶಾಮಕ ದಳ ಹಾಗೂ ತುರ್ತುಸೇವೆಗಳ ವಿಭಾಗದ ಹೆಚ್ಚುವರಿ ಪೊಲೀಸ್ ಮಹಾ ನಿರ್ದೇಶಕ (ಎಡಿಜಿಪಿ) ಎಂ. ನಂಜುಂಡಸ್ವಾಮಿ (ಮನಂ) ಅವರು ಶನಿವಾರ ಸಂಜೆ ನಗರದಲ್ಲಿ ನೂತನ ಕ್ಯಾಲೆಂಡರ್ ನ್ನು ಬಿಡುಗಡೆ ಮಾಡಿದರು.
ಮನಂ ಅವರ ಜನಪ್ರಿಯ ‘ನಾವೆಲ್ಲಾ ಭಾರತೀಯರು, ನಮ್ಮೆಲ್ಲರ ಧರ್ಮ ಭಾರತೀಯ ಧರ್ಮ, ನಮ್ಮ ಧರ್ಮಗ್ರಂಥ ಭಾರತದ ಸಂವಿಧಾನ’ ಘೋಷವಾಕ್ಯ ಕ್ಯಾಲೆಂಡರ್ ನಲ್ಲಿದ್ದು ಗಮನಸೆಳೆಯುತ್ತಿದೆ. ಜತೆಗೆ ಮನಂ ಅವರ ಸಂಕ್ಷಿಪ್ತ ಪರಿಚಯದೊಂದಿಗೆ ಭಾವಚಿತ್ರವೂ ಆಕರ್ಷಕವಾಗಿದೆ.
ಈ ಸಂದರ್ಭದಲ್ಲಿ ಬೆಂಗಳೂರು ಜಿಲ್ಲಾ ಕಮಾಂಡೆಂಟ್ ರಾಜೇಶ್ ಜಯಸಿಂಹ, ಕರ್ನಾಟಕ ಭೋವಿ ಬಳಗದ ರಾಜ್ಯಾಧ್ಯಕ್ಷ ಲೋಕೇಶ್, ಇತಿಹಾಸ ತಜ್ಞ ಡೇವಿಡ್, ಕೃಷ್ಣರಾಜಪುರ ವಿಧಾನ ಸಭಾ ಕ್ಷೇತ್ರದ ಕನ್ನಡ ಸಾಹಿತ್ಯ ಪರಿಷತ್ತು ಅಧ್ಯಕ್ಷ ಸುರೇಶ ಹೊಸಮನಿ ಉಪಸ್ಥಿತರಿದ್ದರು.
—–