ಬಳ್ಳಾರಿ, ಜ.5: ಕರ್ನಾಟಕ ಸಮರ ಸೇನೆಯ ಜಿಲ್ಲಾಧ್ಯಕ್ಷ, ಕೋಳೂರು ಗ್ರಾಮ ಪಂಚಾಯಿತಿ ಮಾಜಿ ಸದಸ್ಯ ಸಿ. ಶ್ರೀನಿವಾಸ್(47) ಭಾನುವಾರ ಮಧ್ಯಾಹ್ನ ನಗರದ ಬಿಮ್ಸ್ ಆಸ್ಪತ್ರೆಯಲ್ಲಿ ನಿಧನರಾದರು.
ಪತ್ನಿ, ಮೂವರು ಪುತ್ರರು, ಓರ್ವ ಪುತ್ರಿ, ಮೂವರು ಅಣ್ಣಂದಿರು ಸೇರಿದಂತೆ ಅಪಾರ ಬಂಧು ಮಿತ್ರರನ್ನು ಶ್ರೀನಿವಾಸ್ ಅಗಲಿದ್ದಾರೆ.
ವರ್ಷದ ಹಿಂದೆ ಮೂತ್ರಪಿಂಡ ವೈಫಲ್ಯದಿಂದ ಬೆಂಗಳೂರಿನ ಖಾಸಗಿ ಆಸ್ಪತ್ರೆಯಲ್ಲಿ ಶಸ್ತ್ರಚಿಕಿತ್ಸೆಗೆ ಒಳಗಾಗಿದ್ದ ಶ್ರೀನಿವಾಸ ಚೇತರಿಸಿಕೊಂಡಿದ್ದರು. ಇವರ ಶ್ರೀಮತಿ ಅವರೇ ಒಂದು ಮೂತ್ರಪಿಂಡವನ್ನು ದಾನ ಮಾಡಿದ್ದರು. ವಾರದ ಹಿಂದೆ ತೀವ್ರನೋವು ಕಾಣಿಸಿಕೊಂಡಿದ್ದರಿಂದ ಮತ್ತೇ ಬೆಂಗಳೂರಿನ ಆಸ್ಪತ್ರೆಯಲ್ಲಿ ಶಸ್ತ್ರಚಿಕಿತ್ಸೆಗೆ ಒಳಗಾಗಿ ಗ್ರಾಮಕ್ಕೆ ವಾಪಸಾಗಿದ್ದರು. ಶನಿವಾರ ಬಿಮ್ಸ್ ಆಸ್ಪತ್ರೆಗೆ ದಾಖಲಾಗಿದ್ದರೂ ಚಿಕಿತ್ಸೆ ಫಲಕಾರಿಯಾಗದೇ ಕೊನೆಯುಸಿರು ಎಳೆದರು.
ಸೋಮವಾರ ಬೆಳಿಗ್ಗೆ 10 ಗಂಟೆಗೆ ಕೋಳೂರು ಗ್ರಾಮದ ರುದ್ರಭೂಮಿಯಲ್ಲಿ ಅಂತಿಮ ಸಂಸ್ಕಾರ ನೆರವೇರಿಸಲಾಗುವುದು ಎಂದು ಕುಟುಂಬದ ಮೂಲಗಳು ತಿಳಿಸಿವೆ.
ಕನ್ನಡಪರ ಹೋರಾಟಗಳಲ್ಲಿ ತೊಡಗಿಸಿಕೊಂಡಿದ್ದ ಶ್ರೀನಿವಾಸ್ ಗ್ರಾಮ ಪಂಚಾಯಿತಿ ಸದಸ್ಯರಾಗಿ ವಿವಿಧ ಸಂಘ ಸಂಸ್ಥೆಗಳ ಪದಾಧಿಕಾರಿಗಳಾಗಿ ಸಮಾಜ ಸೇವಕರಾಗಿ ಗಮನ ಸೆಳೆದಿದ್ದರು.
ಕಂಬನಿ: ಕಂಪ್ಲಿ ಶಾಸಕ ಜೆಎನ್ ಗಣೇಶ್, ಗುಲ್ಬರ್ಗಾ ವಿವಿ ಮಾಜಿ ಸೆನೆಟ್ ಸದಸ್ಯ ಸಿ.ಮಂಜುನಾಥ್, ರಿಪಬ್ಲಿಕ್ ಸೇನೆ ಹಾಗೂ ಕನ್ನಡ ಸೇನೆಯ ಮುಖಂಡ ಹಂಪಾಪಟ್ಟಣದ ಸಿ. ಹಾಲೇಶ್, ನ್ಯಾಯವಾದಿ ಸಿ. ಬಸವರಾಜ್, ಪತ್ರಕರ್ತ ಸಿ. ಶಿವಾನಂದ, ಕೋಳೂರು ಗ್ರಾಮ ಪಂಚಾಯತಿ ಅಧ್ಯಕ್ಷರು, ಉಪಾಧ್ಯಕ್ಷರು, ಸದಸ್ಯರು, ಸಿಎಂಎಸ್ ಜಿಲ್ಲಾ ಮುಖಂಡರು ಸೇರಿದಂತೆ
ಹಲವು ಗಣ್ಯರು ಶ್ರೀನಿವಾಸ್ ಅಕಾಲಿಕನಿಧನಕ್ಕೆಕಂಬನಿಮಿಡಿದಿದ್ದಾರೆ.
—–