ಬಳ್ಳಾರಿ, ಜ. ೫: ಸಾಹಿತ್ಯ, ಸಂಗೀತ ಹಾಗೂ ಕಲಾ ಪರಂಪರೆಯ ಪರಿಚಯ ಮಕ್ಕಳು ಹಾಗೂ ಯುವ ಸಮುದಾಯಕ್ಕೆ ಸಿಗುವಂತಾಗಬೇಕು ಎಂದು ಜಿಲ್ಲಾ ಗುತ್ತಿಗೆದಾರರ ಸಂಘದ ಪ್ರಧಾನ ಕಾರ್ಯದರ್ಶಿ ಎಂ.ಚಂದ್ರಶೇಖರ ಗೌಡ ಮಸೀದಿಪುರ ಅವರು
ತಿಳಿಸಿದರು.
ಬಳ್ಳಾರಿ ಜಿಲ್ಲಾ ಕಲಾವಿದರ ಸಂಘ ಇಲ್ಲಿನ ಡಾ.ಜೋಳದರಾಶಿ ದೊಡ್ಡನಗೌಡ ರಂಗಮಂದಿರದಲ್ಲಿ
ಹಮ್ಮಿಕೊಂಡಿರುವ ಬಳ್ಳಾರಿ ಜಿಲ್ಲಾ ಕಲಾವೈಭವ-2025 ದ ಸಮಾರೋಪ ಸಮಾರಂಭದಲ್ಲಿ ಅವರು ಮಾತನಾಡಿದರು.
ಮಕ್ಕಳಿಗೆ ಮನೆಯಲ್ಲಿಯೇ ಸಂಸ್ಕಾರ ನೀಡಬೇಕು. ನಮ್ಮ ಪೂರ್ವಜರು ಅನೇಕ ಕಲಾ ಪ್ರಕಾರಗಳನ್ನು ಪರಿಚಯಿಸಿದ್ದಾರೆ. ಅವುಗಳನ್ನು ಜತನದಿಂದ
ಕಾಪಾಡಿಕೊಂಡು ಹೋಗುವ ಜವಾಬ್ದಾರಿ ಪ್ರತಿಯೊಬ್ಬರ ಮೇಲಿದೆ ಎಂದು ಹೇಳಿದರು.
ಕಲಾವಿದರನ್ನು ಪ್ರೋತ್ಸಾಹಿಸುವ ಹಾಗೂ ಅವರ ಕಲಾಪ್ರತಿಭೆಯನ್ನು ಉತ್ತೇಜಿಸುವ ಕೆಲಸವೂ ಆಗಬೇಕು ಎಂದರು.
ಜಿಲ್ಲೆಯ ಕಲಾವಿದರ ಹಿತ ಕಾಯುವ ಆಶಯದಿಂದ ಅಸ್ತಿತ್ವಕ್ಕೆ ಬಂದಿರುವ ಬಳ್ಳಾರಿ ಜಿಲ್ಲಾ
ಕಲಾವಿದರ ಸಂಘದಿಂದ ಮೊದಲ ಬಾರಿಗೆ ಆಯೋಜಿಸಿರುವ ಕಲಾವೈಭವಕ್ಕೆ ಸಾವಿರಾರು ಜನ
ಕಲಾಸಕ್ತರು ಪಾಲ್ಗೊಂಡು ಯಶಸ್ವಿಗೊಳಿಸಿದ್ದು, ಈ ರೀತಿಯ ಕಲಾ ಪರಂಪರೆಯ ಉಳಿಸುವ ಕೆಲಸ
ನಿರಂತರವಾಗಿ ನಡೆಯುವಂತಾಗಲಿ ಎಂದು ಆಶಿಸಿದರು.
ಮುಖ್ಯ ಅತಿಥಿ ರಾಜ್ಯ ಸರ್ಕಾರದ ಜಂಟಿ ಕಾರ್ಯದರ್ಶಿ ಪಂಪನಗೌಡ ಮೇಲುಸೀಮೆ ಅವರು ಮಾತನಾಡಿ, ಬಳ್ಳಾರಿ ಜಿಲ್ಲೆಯ ಕಲಾ ಶ್ರೀಮಂತಿಕೆಯನ್ನು
ಪ್ರಶಂಸಿದರಲ್ಲದೆ, ಸರ್ಕಾರದ ಅಧಿಕಾರಿಯಾಗಿ ಕಲಾವಿದರಿಗೆ ಬೇಕಾದ ಪ್ರೋತ್ಸಾಹ ನೀಡಲು
ನಾನು ಸಿದ್ಧನಿದ್ದೇನೆ ಎಂದು ಭರವಸೆ ನೀಡಿದರು.
ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ನಿವೃತ್ತ ಹಿರಿಯ ಅಧಿಕಾರಿ ಚೋರನೂರು ಕೊಟ್ರಪ್ಪ
ಹಾಗೂ ಕನ್ನಡ ಸಾಹಿತ್ಯ ಪರಿಷತ್ತಿನ ಜಿಲ್ಲಾಧ್ಯಕ್ಷ ನಿಷ್ಠಿ ರುದ್ರಪ್ಪ ಅವರು ಮಾತನಾಡಿದರು.
ಜಂಗಮಹೊಸಹಳ್ಳಿಯ ಪುರವರ್ಗ ಮಠದ ಶ್ರೀ ಅಜಾತ ಶಂಭುಲಿಂಗ ಶಿವಾಚಾರ್ಯ ಸ್ವಾಮಿ
ಸಾನ್ನಿಧ್ಯ ವಹಿಸಿ ಮಾತನಾಡಿದರು. ಲೇಖಕ ಡಾ.ಸಿದ್ಧರಾಮ ಕಲ್ಮಠ, ರಂಗತೋರಣ ಕಾರ್ಯದರ್ಶಿ
ಪ್ರಭುದೇವ ಕಪ್ಪಗಲ್, ಲೆಕ್ಕಪರಿಶೋಧಕರಾದ ಸಿದ್ಧರಾಮೇಶ್ವರಗೌಡ ಕರೂರು,
ಸಿ.ಎರಿಸ್ವಾಮಿ, ಜೆಟಿ ಫೌಂಡೇಶನ್ ಮುಖ್ಯಸ್ಥ ತಿಮ್ಮಪ್ಪ ಜೋಳದರಾಶಿ, ಬಳ್ಳಾರಿ ಜಿಲ್ಲಾ ಕಲಾವಿದರ ಸಂಘದ ಅಧ್ಯಕ್ಷ ಯಲ್ಲನಗೌಡ ಶಂಕರಬಂಡೆ, ಕಾರ್ಯದರ್ಶಿ
ಎಚ್.ತಿಪ್ಪೇಸ್ವಾಮಿ ಮುದ್ದಟನೂರು, ಖಜಾಂಚಿ ರಮಣಪ್ಪ ಭಜಂತ್ರಿ, ಜಂಟಿ ಕಾರ್ಯದರ್ಶಿ
ವೀರೇಶ ದಳವಾಯಿ, ಸುಬ್ಬಣ್ಣ ಮತ್ತಿತರರಿದ್ದರು. ಎಂ.ವಿನೋದ್ ನಿರ್ವಹಿಸಿದರು. ಇದೇ ವೇಳೆ ವಿವಿಧ ಕ್ಷೇತ್ರಗಳಲ್ಲಿ ಸಾಧನೆಗೈದ ಮಹನೀಯರನ್ನು
ಸನ್ಮಾನಿಸಲಾಯಿತು.
—–