ಅನುದಿನ ಕವನ-೧೪೬೯, ಕವಯಿತ್ರಿ: ಡಾ. ಕೃಷ್ಣವೇಣಿ ಆರ್ ಗೌಡ, ಹೊಸಪೇಟೆ, ಕವನದ ಶೀರ್ಷಿಕೆ: ಅವಸ್ಥೆ

ಅವಸ್ಥೆ

ತೂಕಡಿಸುವ ಅವಸ್ಥೆಯಲಿ
ನ್ಯಾಯದ ವ್ಯವಸ್ಥೆ ತಲೆ ಕೆಡಿಸಿ
ಸೋತಿದೆ…
ಇದಕೆ ಲಂಗು ಲಗಾಮಿಲ್ಲದ
ಸುತ್ತಲಿನ ಅವಸ್ಥೆ ಎಲ್ಲವನು
ತಿರುಗಿಸಿ ಆಟವ ನೋಡುತಿದೆ…

ಬೆಂಬಿಡದ ಕುತಂತ್ರ ಸಿದ್ಧಾಂತ ವನು ಎಳೆದು ತಳ್ಳಿ ಕಣ್ ಪ ಟ್ಟಿಯಲಿ ಕೊಂದು ಹಾಕಿ
ವ್ಯಂಗ್ಯ ನಗೆಯಲಿ ಸ್ವಚ್ಛ
ಮನಕೆ ಕಬ್ಬಿಣದ ಸಲಾಕೆಯಲಿ
ಹೊಡೆಯುತ್ತಿದೆ…..

ಬಿಡಿಸಲಾರದ ಮೌನ ಬೇಸತ್ತು
ತನ್ನ ಹಿಂದಿನ ಬಾಲ್ಯವ ಪುಟ
ತಿರುವುತ ಅವಸ್ಥೆಯ ಕಂಡು
ತಲೆ ತಗ್ಗಿಸಿದೆ….

ಆದರೂ ಬಿಡುತ್ತಿಲ್ಲವೆ ಪರಿ ಪರಿಯ ವ್ಯವಸ್ಥೆ…
ಬಂದು ಹೋಗುವ ಬರಿ ನೆಲದ
ಲಾಲಿಯಲಿ ಎಲ್ಲ ತಲೆ ಕೆಳಕಾಗಿ
ಮಲಗಿವೆ…

ಒಮ್ಮವಿಲ್ಲದಿದ್ದರೂ ಒಪ್ಪಿಕೊಳ್ಳುವ ಅವಸ್ಥೆಯ ವ್ಯವಸ್ಥೆ,, ಎಷ್ಟು ಘೋರವಲ್ಲ ವೆ ಈ ನಿಜದ ಸಂತೆ…

ಪ್ರಾಸದ ತುಸು ತುಣುಕಿಗೆ
ರಾಜೀನಾಮೆಯ ಹಸಿವು ಹಗಲಿರುಳು ಚಿಂತೆಗೈದಿದೆ
ಒದ್ದಾಟದ ಬೇಗಿಗೆ ಒಡೆದ
ಪಾರ್ಶವಾಯು ಕೂಡ ಸಂತಸದ ಬೇಲಿ ಹಾರಲು
ಹೊಸ ಚಂಡ ಎಸೆಯುತಿದೆ….

ಗೊತ್ತಿಲ್ಲ,, ಜಗದ ಜ್ಯೋತಿರ್ಮಯಕೆ ಹೊಸ ಅಲೆಯ ವ್ಯವಸ್ಥೆ ಕಾಯುತಿದೆ,,,
ಅಚ್ಚ ಹಸಿರು ಪೈರ ಸಂಭ್ರಮ ಯಾರನ್ನೂ ಕೆಣಕಿಲ್ಲ,
ಆದರೂ ಯಾಕೇ ಈ ಸಮಾಜದ ಕ್ರೂರ ಅವಸ್ಥೆ….

-ಡಾ. ಕೃಷ್ಣವೇಣಿ ಆರ್ ಗೌಡ, ಹೊಸಪೇಟೆ
—–